Submission 1974

ಸೈನಿಕ — ದೇಶದ ರಕ್ಷಕ

ರಚನೆ : ರುಚಿತ ಬಿ ಎಸ್

----------------------------------

ಗಡಿಯ ಸುತ್ತುವರೆದು ನಿಂತಿದ್ದಾನೆ ಒಬ್ಬ ಜೋಗಿ, ತಾಯಿನಾಡ ಕಾಪಾಡುವ ಹೊಣೆ ಹೊತ್ತ ನಿಸ್ವಾರ್ಥ ಯೋಗಿ. ಹಿಮದ ತಂಪು ಚುಂಬಿಸಿದರೂ ಅವನ ದೇಹ ಜ್ವಲಿಸುತ್ತದೆ, ಏಕೆಂದರೆ ಪ್ರತಿಯೊಂದು ಕಣವು “ಜೈ ಭಾರತಾಂಬೆ” ಎನ್ನುತ್ತದೆ. ಅವನ ಮನ ಮಿಡಿಯುತ್ತದೆ ದೇಶದ ಹಿತಕ್ಕಾಗಿ, ಎಂದಿಗೂ ಬದ್ಧನಾಗಿದ್ದಾನೆ ತನ್ನ ಕರ್ತವ್ಯಕ್ಕಾಗಿ. ಪ್ರತಿ ಹೆಜ್ಜೆಯ ಹಿಂದೆ ಕಾದಿದೆ ತಾಯಿಯ ಪ್ರಾರ್ಥನೆ, ದೇಶದ ನಗುವೇ ಅವನ ಜೀವನದ ಧ್ಯೇಯವೆ. ಮಳೆ, ಬಿಸಿಲು, ಹಿಮ, ಬಿರುಗಾಳಿ — ಎಲ್ಲದರ ಜೊತೆ ಗೆಳೆತನ, ಏಕೆಂದರೆ ಅವನ ಹೃದಯದಲ್ಲಿದೆ ಶೌರ್ಯದ ಶಾಶ್ವತತನ. ಶರೀರ ಕಳೆಯಬಹುದು, ಆದರೆ ನಂಬಿಕೆ ಅಜರಾಮರ, ಆತ ಭೂಮಿಯಲ್ಲಿ ಬೇರೂರಿ, ನೆರಳು ನೀಡುತ್ತಿರುವ ಬೃಹತ್ಮರ. ಆತ ತ್ಯಾಗದ ರೂಪ, ದೇವರ ಪ್ರತಿರೂಪ, ಅವನ ಸ್ಥೈರ್ಯದಿಂದ ನಾಡು ಕಂಡಿದೆ ಹೊಸ ಸ್ವರೂಪ.

----------------------------------

ನೋಂದಣಿ ಐಡಿ : KPFS2-6304

102
Votes
442
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top