ಕಂಡು ಕಣ್ಮರೆಯಾದ ಕನ್ನಡತಿಗೆ ಕಿರು ಕವಿತೆ..
ರಚನೆ : Akshay p
----------------------------------
ನಿನ್ನನ್ನು ಕಂಡು ಮನಸ್ಸುಗಳು ಎಷ್ಟೋ, ಅವುಗಳು ಕಾಣದ ಕನಸುಗಳು ಎಷ್ಟೋ... ಅಂತಹ ಎಷ್ಟೋ ಮನಸ್ಸುಗಳಲ್ಲಿ ನನ್ನದೊಂದು ಕನಸು, ನನಸಾಯಿತು ದೇಗುಲದಲ್ಲಿ ಕಂಡು ನಿನ್ನ ಸೊಗಸು.... ಎಷ್ಟು ಚೆಂದವಲ್ಲಾ ದೇವರ ಆಟ ದರ್ಶಿಸಿದನು ನನಗೆ ದೇವತೆಯ ಕಣೋಟ. ನೋಡಿದ ತಕ್ಷಣ ಏರುಪೆರಾಯಿತು ನನ್ನ ಎದೆಬಡಿತ ನಿರ್ಧರಿಸಿದೆ ನೀ ನನ್ನ ಮಡದಿ ಎಂದು ಕೊನೆತನಕ. ತಂಪನೆಯ ಗಾಳಿಯು ಬಿಸುತಿರಲು, ಪ್ರತಿಯಾಗಿ ನಿನ್ನ ಕೂದಲು ನಗುತಿರಲು, ಮೂಡಿತು ಮನದಲ್ಲಿ ನೂರಾರು ಭಾವನೆಗಳು. ಮೆಲ್ಲನೆ ನೀನು ನಕ್ಕಾಗ, ಹುಟ್ಟಿತು ಮನದಲ್ಲಿ ಪ್ರೀತಿಯ ಆಕಾರ. ಹುಣ್ಣಿಮೆ ಚಂದಿರನಂತಿರುವ ಆ ನಿನ್ನ ತ್ವಚೆ, ಹೊರಹಾಕಿತು ಬಚ್ಚಿಟ್ಟ ನನ್ನ ಪ್ರೀತಿಯನ್ನು ಆಚೆ. ತಟ್ಟನೆ ನೀ ತಿರುಗಿ ನನ್ನ ಎದುರು ಬರಲು, ಸುರಿಯಿತು ಮನದಲ್ಲಿ ಉಲ್ಲಾಸದ ಮುಂಗಾರು... ಮೆಲ್ಲನೆ ನಿನ್ನ ಗೆಜ್ಜೆ ನಾದವು ಸಮೀಪಿಸುತ್ತಿರಲು, ಮೂಡಿತು ಮನದಲ್ಲಿ ಮರೆಯಾದ ಕಲ್ಯಾಣಿ ರಾಗವು. ನೀ ನುಡಿದ ಮೊದಲ ನುಡಿ, ಕೇಳಿ ಕಟ್ಟಿದೆ ಮನದಲಿ ನಿನಗೆ ಗುಡಿ.. ಆ ಗುಡಿಯಲ್ಲಿ ನೀನೆ ಒಡತಿ, ಪೂಜಿಸುತ್ತಾ ಬೆಳುಗುವೆನು ನಿನಗೆ ಪ್ರೀತಿಯ ಆರತಿ... ಮನೆಗೆ ತೆರಳಿ ವಿಮರ್ಶೆಸಿದೆ ನಿನ್ನ ಸೌಂದರ್ಯ ನನ್ನ ತಾಯಿಯ ಬಳಿ. ಕೇಳಿದಳು, ಯಾರು ಅವಳು ನನ್ನ ಮಗನನ್ನು ಕದ್ದ ಕಳ್ಳಿ, ಹೇಳುವೆಯ ಅವಳ ಹೆಸರು ನನ್ನ ಬಳಿ.
----------------------------------
ನೋಂದಣಿ ಐಡಿ : KPFS2-6302