Submission 1912

ಅಪ್ಪ ನನ್ನಪ್ಪ

ರಚನೆ : ಮೌನೇಶ್ ಬಡಿಗೇರ್

----------------------------------

ಅಪ್ಪ ನನ್ನಪ್ಪ, ಅಪ್ಪ ನನ್ನಪ್ಪ ಜಗ ಹೊತ್ತರು ಸಿಗದ ಪ್ರೀತಿಯ ಪ್ರತಿರೂಪ ಕೈ ಹಿಡಿದು ನಡೆಸುವ ರಾಯಭಾರಿ ನಮ್ಮೆಲ್ಲಾ‌ಕನಸುಗಳಿಗೆ ಅವನೇ ರೂವಾರಿ ಪ್ರತಿಯೊಬ್ಬ ಮಗನ‌ಬದುಕಿಗೆ ದಾರಿದೀಪ ಮಗಳಿಗಂತೂ ಅವನೇ ದೇವರ ನಿಜರೂಪ ಮನದಲ್ಲಿ ನೋವಿದ್ದರೂ ನಗುವ ಭಾವ ಮನೆಯವರಿಗಾಗಿ ಪ್ರತಿದಿನ ಬದುಕುವ ಜೀವ ನಗು-ನಗುತ್ತಲೇ ಮರೆಸುವನು ಎಲ್ಲಾ ನೋವ ಮಕ್ಕಳಿಗಂತೂ ಅವನೇ ದೇವ ಮಾನವ ತನಗಾಗಿ ಮಾಡಲಿಲ್ಲ ಏನು ತನ್ನವರಿಗಾಗಿಯೇ ಎಲ್ಲಾನೂ ಸ್ವಾರ್ಥದ ಬದುಕಲ್ಲ ಅವನದು ನಿಸ್ವಾರ್ಥ ಜೀವ ಅವನು ಹಗಲಿರುಳು ದುಡಿದು ರೂಪಿಸುವನು ಮಕ್ಕಳ ಭವಿಷ್ಯ ಅವನು ದೇವರಂತ ಮನುಷ್ಯ, ದೇವತಾ ಮನುಷ್ಯ

----------------------------------

ನೋಂದಣಿ ಐಡಿ : KPFS2-6274

48
Votes
435
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top