ಅವ್ವ
ರಚನೆ : ರತ್ನಜ
----------------------------------
ಕಡೆದಳು ಮಜ್ಜಿಗೆ ಬೆಣ್ಣೆಯ ತಾ ತಿನ್ನಲು ಅಲ್ಲ, ಎದೆ ಉರಿಯನು ಮುಚ್ಚಿ ಊದಿದಳೊಲೆಯ ಯಾರಿಗು ಪರಿವೇ ಇಲ್ಲ, ತನಗಿಷ್ಟದ ಮಡದಿ ಸೇರಲು ಮನೆಯ ಮಗನಾದನು ಮೋಜಿನ ಮಲ್ಲ, ಸೊಸೆ ಬಂದರು ಕೂತು ಉಣ್ಣುವ ಭಾಗ್ಯ ನಿನಗಿಲ್ಲ, ಈ ಅನ್ಯಾಯದ ಮೂಟೆಯ ಉದುರಿಸಿ ಕೇಳಲು ಗಂಡನು ಬದುಕುಳಿದಿಲ್ಲ, ಆ ಮೃಗಗಳ ಲೋಕದಿ ಕೊನೆಗೇನಾಗುವೆಯೋ, ಅವ್ವಾ ಆ ದೇವರೆ ಬಲ್ಲ.
----------------------------------
ನೋಂದಣಿ ಐಡಿ : KPFS2-6260