ಹರಿ'ಯುತ್ತಿರುವ ಬದುಕು
ರಚನೆ : ಶ್ರೇಯಸ್.ಎಸ್.ಡಿ.
----------------------------------
ಎಲ್ಲಿ ಅಡಗಿರುವೆ ಹರಿಯೆ, ಎಲ್ಲಿ ಅಡಗಿರುವೆ ಓ ಮುರಾರಿಯೆ, ಧರೆಯಲ್ಲಿ ವೈರಾಣು ತಾಂಡವವಾಡುತ್ತಿದ್ದರೂ ನೀನಿನ್ನು ರಾಸಲೀಲೆ ಆಡುತ್ತಿರುವೆಯೆ?? ಜನರ ಕೂಗು ಕೇಳದಷ್ಟು ದೂರವಾಯಿತೇ ನಿನ್ನ ವೈಕುಂಠ ನೀ ಬರುವೆ ಯೆಂದು ಕಾಯುತ್ತಿಹರು ಅದೆಷ್ಟೋ ಜನ ಪಡುತ್ತ ಸಂಕಟ ಇಲ್ಲಿ ಕೋಟಿ ಗಟ್ಟಲೆ ಜನರ ಪ್ರಾಣ ಪಕ್ಷಿ ಹಾರಿ ಹೋಗುತ್ತಿದ್ದರೂ ನೀನಿನ್ನು ನೆಮ್ಮದಿಯಿಂದ ಬೆಣ್ಣೆ ತಿನ್ನುತಿರುವೆಯೆ?? ದುಷ್ಟಶಕ್ತಿಯ ಹೆದರಿಸುವ ನೀನೇ ಸಹಾಯ ಮಾಡದೆ ಕುಳಿತರೆ ವೈರಾಣು ಕೃಪೆಯಿಂದ ಆದಷ್ಟು ಬೇಗ ಬರಡಾಗುವುದು ನಿನ್ನ ಪ್ರೀತಿಯ ಧರೆ ಹಿಂದು ಕ್ರೈಸ್ತ ಮುಸಲ್ಮಾನರೆಲ್ಲರು 'ವೈದ್ಯೋ ನಾರಾಯಣೋ ಹರಿಃ' ಎನ್ನುವಾಗ ನೀ ಸಲಹು ಇಂತವರ ಮತ್ತು ಸರಿ ಮಾಡು ಅವರ ರೋಗ ಸುದರ್ಶನ ಚಕ್ರದಿಂದಾದರೂ ಸರಿ, ನಿನ್ನ ಮಾಯೆಯಿಂದಾದರೂ ಸರಿ ಈ ರೋಗವನ್ನು ನಿವಾರಿಸಿ ಜನರಿಗೆ ಬದುಕುವ ಅವಕಾಶ ನೀಡು ಓ ಹರಿಯೆ.
----------------------------------
ನೋಂದಣಿ ಐಡಿ : KPFS2-6258