ಕಡಲಲಿ - ಕರಗಲಿ
ರಚನೆ : ಆಕಾಶ್. ಆರ್. ಕೆ
----------------------------------
ಹುಚ್ಚು ಹೆಚ್ಚಾಗಿ ಬಂದಿರುವೆ ಈ ಕಡಲಲಿ ತುಂಬಿಕೊ ನನ್ನ ಭಾವನೆಗಳ ಕಸವನ್ನ ನಿನ್ನ ಒಡಲಲಿ ಮುಳುಗುವ ಸೂರ್ಯನ ಅವೆಗೆಂಪು ಕಿರಣದಲಿ ಕಳಸದಿರು ಉತ್ತರ ಈ ನಿರವ ಸಂಜೆಯಲಿ ತೋರುವೆ ನಾ ನಿರಾಸಕ್ತಿ ಯಾವದೋ ಭಾವಜಂಗುಳಿಯಲಿ ಸಿಗದಿದ್ದರೆ ಪ್ರತ್ಯುತ್ತರ ನೋಡುವೆ ನಾ ಅರೆಗಾಣದ ಚಂದ್ರನಲಿ ಅಸ್ತವಾದರೆ ರವಿ ಬರುವನು ನಾಳಿನ ಖಾಲಿ ಕೈಲಿ ಕೂತಿರುವೆ ಇವತ್ತಿನ ಆಸೆಯ ಮರಳು ಮಣ್ಣಿನ ಸಮಾಧಿಯಲಿ ನಾಳೆ ನಾನಿರುವೆನಾ? ಈ ಜಗದಲಿ ನಿಶಬ್ಧ ಅಲೆಯ ಮುದು ಸ್ಪರ್ಶಕ್ಕೆ ಮುರಿದು ಬೀಳುವಾ ಉಸುಕಿನ ಮನೆಯಲಿ.. ಈ ಕಡಲಲಿ ಇದು ಕರಗಲಿ...
----------------------------------
ನೋಂದಣಿ ಐಡಿ : KPFS2-6251