Submission 1790

ಸೊಬಗಿನ ಸಂಸ್ಕೃತಿ

ರಚನೆ : ಮಂಜುಳಾ ಎಂ ಕೆ

----------------------------------

ದೀಪದ ಬೆಳಕಂತೆ ಪ್ರಜ್ವಲಿಸುವ ಕನ್ನಡ ಸೊಬಗು ಪರ್ವತದ ಮೇಲೆ ಮೂಡಿದೆ ಚೈತನ್ಯದ ಸೊಗಡು ಗೊಮ್ಮಟನ ಶಿಲೆ ಅತನ ವಿಜಯ ಶೌರ್ಯ ಸಾರುತ್ತದೆ ಹಂಪಿಯ ಕಲ್ಲು ರಾಜರ ಇತಿಹಾಸ ಹೇಳುತ್ತದೆ ಪಂಪನ ನುಡಿ ಕುಂವನಾ ಕಾವ್ಯ ಕನ್ನಡ ಕೀರ್ತಿ ಸಾರುತ ವೀರರ ರಕ್ತದಿಂದ ಈ ನಾಡು ಸದಾ ಬೇಳಗುತ .. ಮೆಕ್ಕೆಜೋಳದ ಹೊಲದಲಿ ನಗುತಿದೆ ರೈತನ ಮನ ಕಣ್ಮಣಿ ಕನ್ನಡಿಗನ ಹೃದಯದಲಿ ಪ್ರೀತಿಯ ತನನನ.. ಯಕ್ಷಗಾನ ದಸರಾ ಸಂಸ್ಕೃತಿಯ ರಂಗ ಸಂಗೀತದ ನಾದದಲ್ಲಿ ಹರಿಯುತಿದೆ ಭಾವದ ತರಂಗ.. ಪರ್ವತದ ಹೃದಯದಲಿ ಹುಟ್ಟುವ ಚಿಲುಮೆಯೇ ಸಕಲ ಜೀವಿಗಳ ಕನಸಾಗಿ ಹರಿಯುವ ನದಿಯೇ..! ಹಳ್ಳಿಯ ಹಚ್ಚ ಹಸರಿನ ಸೊಬಗು ನಗರದ ಸ್ಪಂದನೆ ಕನ್ನಡದ ಕಲೆ ನಮ್ಮ ಹೃದಯದ ಬಂದನೆ....!

----------------------------------

ನೋಂದಣಿ ಐಡಿ : KPFS2-6219

1
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top