ಮನೋಗತ
ರಚನೆ : ವಿನೋದ್ ಕುಮಾರ್ ಆರ್ ವಿ
----------------------------------
ಅಬ್ಬಾ! ಎಲ್ಲಾ ಕೆಲಸ ಮುಗಿಯಿತು. ಅಂದುಕೊಂಡೆ ಇನ್ನು ಸಮಯ ನೀಡಬಹುದು ಓದಿಗೆ ಯಾವುದೇ ಅಡೆತಡೆ ಇಲ್ಲ ಹಾದಿಗೆ: ಸೂರ್ಯಾಸ್ತವು ಆಯಿತು, ಊರೆಲ್ಲಾ ತಂಪು ಸಿದ್ದವಾಯ್ತು ಕೊಠಡಿಯಲ್ಲಿ ಟೇಬಲ್ಯಾಂಪು. ಮನದಲ್ಲಿ ಹಚ್ಚಲು, ಜ್ಞಾನದ ದೀವಿಗೆ ಜೋಡಿಸಿಕೊಂಡೆ ಒಂದೊಂದೇ ಹೊತ್ತಿಗೆ ಕುತೂಹಲ ಕೆರಳಿ, ಆಸಕ್ತಿಯು ಅರಳಿ ಪುಸ್ತಕವೊಂದೆತ್ತಿಕೊಂಡೆ ಧನ್ಯತೆಯ ತಾಳಿ ಮಡದಿ ಯಾಕೋ ನಕ್ಕಳು ನನ್ನ ನೋಡಿ. ಕಾರಣ ಗೊತ್ತಾಗಲಿಲ್ಲ, ಇವಳದ್ದು ಇದ್ದದ್ದೇ ಎಂದುಕೊಂಡು ಕೈಗೆ ಎತ್ತಿಕೊಂಡ ಪುಸ್ತಕದ ಶೀರ್ಷಿಕೆ ಓದಿದೆ
----------------------------------
ನೋಂದಣಿ ಐಡಿ : KPFS2-6190