ಮರ್ಯಾದ ಹತ್ಯೆ!
ರಚನೆ : ಸಂಗೀತಾ ಎಂ
----------------------------------
ಪ್ರೀತಿಯ ಕೊಲೆಯೋ, ವಾತ್ಸಲ್ಯದ ಬಲೆಯೋ? ಜನ್ಮ ಕೊಟ್ಟವರ ಅಂಧ ಆತ್ಮಾಭಿಮಾನದಲ್ಲಿ ಮುಗ್ಧ ಮಕ್ಕಳ ಒಲವಿನ ಬಲಿಯೋ, ಅರಿತವರಾರು ಈ ಲೆಕ್ಕಾಚಾರವ....!? ಜೀವ ಕೊಟ್ಟವರ ಮಮತೆಯಲ್ಲಿ ಸಿಲುಕಿ, ಪ್ರೀತಿಯ ಮಳೆ ಸುರಿದವರ ಮನವ ಹೊಸಕಿ, ನಿನ್ನೆಯ ನೆನಪೋ, ನಾಳೆಯ ಕನಸೋ ಎಂಬ ಆಯ್ಕೆಲ್ಲಿ ಸೋತು ಕೊರಗುವ ಪುಟ್ಟ ಹೃದಯಗಳ ಹೊಯ್ದಾಟ! ದೂಷಿಸುವುದು ಯಾರನ್ನ? ಸ್ವಂತ ಮಕ್ಕಳ ಮನ ಅರಿಯದ ತಂದೆ ತಾಯಿಗಳನ್ನೆ, ಪ್ರೀತಿಸಿದವರ ಒಲವ ಸವಿಯಲು ಚಡಪಡಿಸುವ ಮಗು ಮನಸ್ಸನ್ನೆ, ಅಥವಾ... ಆಸ್ತಿ- ಅಂತಸ್ತು, ಕುಲ - ಗೋತ್ರ, ಜಾತಿ - ಧರ್ಮವೆಂಬ ವಿಷ ಬೀಜವನ್ನು ಇವರಿಬ್ಬರ ಮಧ್ಯೆ ಬಿತ್ತಿ ತಮಾಷೆ ನೋಡುವ ಸಮಾಜವನ್ನೆ, ಅರಿತವರಾರು ಈ ಲೆಕ್ಕಾಚಾರವ....!?
----------------------------------
ನೋಂದಣಿ ಐಡಿ : KPFS2-6171