Submission 1671

ನಿನಗೆ ಹೇಳಬೇಕಿದ್ದ ಮಾತು

ರಚನೆ : ಶಶಾಂಕ್ ಪ್ರಕಾಶ್

----------------------------------

ಮಳೆ ಹೀಗೆ ಬರುತಿರಲಿ, ಕೊಡೆ ಹಿಡಿ ನೀ ನನ್ನ ಜೊತೆ. ಝರಿ ಹೀಗೇ ಹರಿಯಲಿ, ನೀ ನಡೆ ನನ್ನ ಕೈ ಬಿಡದೆ. ದಾರಿ ಮಂಜು ಹಿಡಿದಿದೆ, ವಿಶಾಲವಾದುದಾಗಿದೆ; ಪಯಣ ಸುಖವ ಸವಿದ ಮನಕೆ ನಿಲ್ದಾಣ ಬೇಡವಾಗಿದೆ. ಹೆಜ್ಜೆ ಹೆಜ್ಜೆ ನಡೆಯಲು ನಿನ್ನ ಗೆಜ್ಜೆ ಸದ್ದು ಕೇಳಿದೆ, ಮತ್ತೆ ಮತ್ತೆ ನೆನೆಯಲು ಮುಗುಳುನಗೆಯು ಮೂಡಿದೆ. ಮೌನಿ ನಾನು; ಆದರು, ನಿನಗೂ ಹೇಳಲೊಂದಿದೆ; ಹೇಳಬೇಕು ಎಂಬ ಮಾತು ಚಡಪಡಿಕೆಯಲಡಗಿದೆ. ಏನು ಹೇಳದಿದ್ರು ನಿನ್ನ ಮಾತು ನನಗೆ ತಿಳಿದಿದೆ, ಹೆಗಲ ವರಗಿ ಕಳೆದ ಸಮಯವದಕೆ ಸಾಕ್ಷಿಯಾಗಿದೆ. ಹೋಗುವಷ್ಟು ದೂರ ಹೋದಮೇಲೆ ತಿರುಗಿ ನೋಡಿದೆ, ನನ್ನ ನಿನ್ನ ದಾರಿ ಎರಡು ಒಂದೇರೀತಿ ಕಾಣಿದೆ, ಒಂದೇ ಸಮನೆ ಸಾಗಿದೆ. ವ್ಯತ್ಯಾಸವಿಲ್ಲದಿದ್ರು, ಕೊರತೆ ಅದರಲೊಂದಿದೆ; ನಾ ಹೇಳಬೇಕಿದ್ದ ಮಾತು... ಮೌನವಾಗೆ ಉಳಿದಿದೆ..

----------------------------------

ನೋಂದಣಿ ಐಡಿ : KPFS2-6152

7
Votes
154
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top