Submission 1611

ನಿತ್ಯ ಸುಮಂಗಲೆ

ರಚನೆ : ವೈಭವ್ ಹೆಗ್ಡೆ

----------------------------------

ಕಾಸಿಗೆ ತಾಂಬೂಲದಂತೆ ತಿಂದಂತೆ ತಾಸಿಗೆ ಅಗಿದರು ಜಗಿದರು ರಸವಿಂಗಿ ಗಸಟು ತುಪ್ಪಿ ಅಧರವ ಒರೆಸಿಕೊಂಡತೆ ಬಿಸುಟರು ಹರಿದಂಬರವೆಂಬಂತೆ ಕಾಲೊರೆಸಲು ಬಾಗಿಲಾಚೆ ಇಟ್ಟರು ಕುನ್ನಿ ಮುಟ್ಟಿದ ಮಡಿಕೆಯೆಂದು ಊರ ಹೊರಗೆಸೆದರು ಲಾವಂಚದ ಘಮದ ಮಂಚದಂಥ ತೂಗುಯ್ಯಾಲೆಯ ತೂಗುತ್ತ ತನುಮನವ ತೂಗಿ ತೂಗಿ ಸುತ್ತ ಸುತ್ತಿ ಬೇಸತ್ತು ತೊರೆದರು ಎಲ್ಲರಿಗಾದವಳು ಯಾರಿಲ್ಲದವಳು ಗುರುತಿಲ್ಲದ ಗರತಿಯಂತೆ ಬಾಡಿದರು ಘಮಿಸುವ ಸುಮದಂತೆ ಪತಿತಳು ನಾ ನಿತ್ಯಮಂಗಳೆಯಂತೆ

----------------------------------

ನೋಂದಣಿ ಐಡಿ : KPFS2-6121

3
Votes
130
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top