Submission 1595

ಬಾಳ ಸಂಗಾತಿ

ರಚನೆ : ಅದಂ ಖಾನ್

----------------------------------

ಬಾಳ ಸಂಗಾತಿ ನನ್ನೋಡಾಗೂಡಿ ನಾಲ್ಕು ಹೆಜ್ಜೆಯ ಇಡಬಲ್ಲೇಯ ನೀ ನಾಲ್ಕು ಹೆಜ್ಜೆಯ ಇಡಬಲ್ಲೇಯಾ...!? ಈ ಬಾಳ ಪಯಣ ನೀ ನನ್ನೊಂದಿಗೆ ಕೂಡಿ ಜೋತೆಯಾಗಿ ಸಾಗುವೇಯಾ ನೀ ಜೋತೆಯಾಗಿ ಸಾಗುವೇಯಾ....!? ಕಷ್ಟಗಳು ಬರಬಹುದು, ನಷ್ಟವೂ ಇರಬಹುದು, ಇದನ್ನೆಲ್ಲಾ ದಾಟಿ ನೀನು ನನ್ನೊಂದಿಗೆ ಇರಬಲ್ಲೆಯಾ, ನೀ ನನ್ನೊಂದಿಗೆ ಇರಬಲ್ಲೆಯಾ....!? ಸಪ್ತಪದಿಯ ತುಳಿದ ನೀ ಸಂಜೆಯ ಸಮಯದಿ, ಕಾಫಿಯ ಹೀರುತ್ತಾ ಕಾಲಾವ ಕಳೆಯುವೆಯ, ನೀ ನನ್ನೊಂದಿಗೆ ಕಾಲಾವ ಕಳೆಯುವೆಯಾ...!? ಬಾಳ ಮುಸ್ಸಂಜೆಲಿ, ಕಡಲ ತೀರದಲಿ ಕಂದೀಲು ಹಿಡಿದು ನನ್ನೊಂದಿಗೆ ಕೂರುವೆಯಾ ನೀ ನನ್ನೊಂದಿಗೆ ಕೂರುವೆಯಾ...!? ಈ ಬಾಳ ಪಯಣ ಮುಗಿಸಿದ ಸಮಯ ಖುಷಿಯಿಂದ ಇದ್ದು ನೀ ಚರಮಗೀತೆಯ ಹಾಡುವೆಯ ನೀ ಚರಮಗೀತೆಯ ಹಾಡುವೆಯಾ...!?

----------------------------------

ನೋಂದಣಿ ಐಡಿ : KPFS2-6074

9
Votes
153
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top