Submission 1585

ನನ್ನ ಕನ್ನಡ

ರಚನೆ : ಅಭಿನಂದನ್ ಕೆ ಎಂ

----------------------------------

ಕನ್ನಡವೇನು ಬರಿ ಗಾಜ ಕನ್ನಡಿಯೇ ಮರ್ಕಟಂಗಳ ಬಾಯ್ಕಲ್ಲಿಗೆ ಬಿರುಕಲು ಪಂಪಪೊರಜನ್ನ ಅಸಗನೀತ ರಾಯನಿಗೂ ಮುನ್ನುಡಿ ಪುಟ್ಟಪ್ಪ ಬೇಂದ್ರೆ ಮಾಸ್ತರಿಗೂ ಬೆನ್ನುಡಿ ಪರ್ವದಿಂದ ಕರುಣಗನ್ನಡಿಗರ ಗರ್ವತನಕ ಅ ಇಂದೈವತ್ತೆರಡು ನುಡಿಯು ಸಂಗೀತ ಶುದ್ಧಗಮಕ ಲಿಪಿರಾಜ್ಞೆ ಎಂಬುದೇನು ಬರಿಯೇ ಅದು ಮುಕುಟ ರತ್ನಪದಕ. ಬೆಂದುಬಳಲಿಬಾಯಾರಿಬಂದ ಭ್ರಮರನಿಗೆ ಬದುಕ ಸವಿಯ ಉದಕ ಉಜ್ಜಬೇಡ ನೀನು ಬರಿಯೇ ಕೊರಡಗಲ್ಲು ಎನ್ನದೆಯ ನುಡಿಯು ಸರಸತಿಯೊಡವೆಯ ಶುದ್ದ ಕನಕ ಕೂಗಿ ಕೂಗಿ ಕಿರುಚಿ ಹಾಡಿ ಬೆಂಕಿ ಹಚ್ಚಿ ನಿಮ್ಮ ಮೌನಕ್ಕೆ ತಾಯಿಯನ್ನು ತಾಯಿಯೆನಲು ಯಾಕೆ ಬೇಕು ನಾಚಿಕೆ ಕನ್ನಡವೆಂಬುದೇನು ಬರಿಯ ಹೆಸರೇ ಮಣ್ಣಿಗೆ ಅದುವೇ ಹೆಸರು ಜ್ಞಾನಕೆ, ಧ್ಯಾನಕ್ಕೆ, ಬದುಕಿಗೆ, ತಾಯಿಗೆ, ಅನಂತಕೆ

----------------------------------

ನೋಂದಣಿ ಐಡಿ : KPFS2-6025

2
Votes
130
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top