ಜೀವನ
ರಚನೆ : ದೇವೇಂದ್ರನ್ ಕುಟ್ಟಿ
----------------------------------
ಓ ಸುಗಂಧ ಮಾರುತವೇ ನಿನ್ನ ಗಾಳಿಯ ಕೊಂಚ ಕೊಡು ನನಗೆ ಹುಸಿರುಬಿಡಲು ಗಾಳಿಯಿಲ್ಲ ಕಲ್ಮಶ ತುಂಬಿ , ವಾಯುಮಾಲಿನ್ಯವಾಗಿದೆ ಕೊಡು... ಓ ನೀಲಿ ಕಡಲೇ ನಿನ್ನ ನೀರ ಕೊಂಚ ಕೊಡು ನನ್ನ ಕಂಬನಿ ಬತ್ತಿದೆ ಕಣ್ಣೀರಿಲ್ಲಾ ಅಳಲು ಮತ್ತೆ ನೀರಿಲ್ಲ ಕೊಡು... ಓ ಕಪ್ಪು ಕನ್ನಡ ಮಣ್ಣೇ ನಿನ್ನ ಮಣ್ಣ ಕೊಂಚ ಕೊಡು ನನ್ನ ಶವಸಮಾಧಿ ಮಾಡಲು ಜಾಗವಿಲ್ಲ, ನಿನ್ನ ಜಾತಿಯಿಂದ ಭಾಗಮಾಡಿದ್ದಾರೆ ಜಾಗವಿಲ್ಲ ಕೊಡು... ಏಕೆಂದ್ರೆ, ಗಾಳಿ ಇಲ್ಲದೆ ಸತ್ತಿದ್ದೇನೆ, ಅಳಲು ಕಣ್ಣೀರಿಲ್ಲ ನನ್ನ ಶವಸಮಾಧಿ ಮಾಡಲು ಜಾಗವಿಲ್ಲ. ಇದೇ ಜೀವನ
----------------------------------
ನೋಂದಣಿ ಐಡಿ : KPFS2-6103