Submission 1563

ನಾ ಕಂಡ ನನ್ನವ್ವ

ರಚನೆ : ಮಾದಿಹಳ್ಳಿ ಅರುಣಾ

----------------------------------

ನನ್ನವ್ವ ತುಂಬಾ ಒಳ್ಳೆಯಾಕಿ, ಒಂಬತ್ತು ತಿಂಗಳು ನೋವನ್ನುಂಡು ಹೆತ್ತಾಕಿ ನಾ ಎಡವಿ ಬಿದ್ದಾಗ ಕೈಹಿಡಿದು ನಡೆಸಿದಾಕಿ ನನ್ನ ಹಣೆಗೆ ಮುತ್ತಿಟ್ಟು ಬಾಯಿಗೆ ತುತ್ತಿಟ್ಟಾಕಿ ದೃಷ್ಟಿಯಾಯಿತೆಂದು ದೃಷ್ಟಿಯ ಬಟ್ಟಿಕ್ಕಿ ದೃಷ್ಟಿಯ ತೆಗೆದಾಕಿ ನನ್ನವ್ವ ತುಂಬಾ ಒಳ್ಳೆಯಾಕಿ || ೧ || ನಾ ಶಾಲೆಗೆ ಹೋದಾಗ ಎನು ಚಂದ ಅಂದಾಕಿ ನಾ ಶಾಲೆಯಿಂದ ಬಂದಾಗ ಕೈಬೀಸಿ ಕರೆದಾಕಿ ನೀನು ಜಾಣ ಕಂದ, ನೀನು ಜಾಣ ಕಂದ ಅಂದಾಕಿ ನೀ ನನ್ನ ಲೋಕಕ್ಕೆ ಅರಸ ಅಂದಾಕಿ ನನ್ನವ್ವ ತುಂಬ ಒಳ್ಳೆಯಾಕಿ || ೧ || ನನ್ನ ಕುಟುಂಬದ ಆಧಾರ ಸ್ಥಂಬ ಆದಾಕಿ ನಮ್ಮಪ್ಪನಿಗೆ ಜೀವನ ಸಂಗಾತಿಯಾದಾಕಿ ನನ್ನವ್ವ ತುಂಬಾ ಒಳ್ಳೆಯಾಕಿ || ೧ ||

----------------------------------

ನೋಂದಣಿ ಐಡಿ : KPFS2-6097

83
Votes
409
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top