Submission 7358

ಮರೆಯಲಾಗದ ನೆನಪು

ರಚನೆ : ಸ್ನೇಹಾ ಆಚಾರ್ಯ

----------------------------------

ಮರೆಯಲಾಗದ ನೆನಪೊಂದು ನೆಪವಾಗಿ ಕಾಡುತಿದೆ ಮಧುರವಾದ ಸ್ವಪ್ನದಿ ಬಂದು ಮರೆಯಾಗಿ ಹೋಗುತಿದೆ ಕಾಡುತಿರುವ ಕಾರಣವ ಹುಡುಕುತ ಹೋಗಲೆ ಮರೆಯಾದ ಸ್ವಪ್ನವ ನೆನಪಿಸುತ ಕೂರಲೆ ಭಾವನೆಗಳ ಬೇಲಿಯಲಿ ಬಂಧಿಯಾದ ಜೀವಕೆ ಮೌನಮುರಿಯದ ಮಾತಿನ ಜೀವಂತಿಕೆ ಮನದ ಭಾವವ ಅರಿಯುವ ಸಾಹಸಕೆ ಮಧುರ ಮೌನದ ಸಹಾಯಕತೆ ಭಾವವಿಲ್ಲದ ಜೀವಕೆ ಭಾವನೆಗಳ ಸಂಧಾನ ಶೋಕವಿಲ್ಲದ ನೋವಿಗೆ ಮುಗುಳುನಗೆಯ ಸಾಂತ್ವನ

----------------------------------

ನೋಂದಣಿ ಐಡಿ : KPFS2-2333

0
Votes
91
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top