Submission 7276

ನಮ್ಮ ನಾಡು, ನುಡಿ

ರಚನೆ : ಮಲ್ಲೇಶ ಎಂ

----------------------------------

ಹೇಳುವೆ ನಾನು ನಿಮಗೆ ಕವಿತೆ, ವರ್ಣಿಸುವೆ ನನ್ನ ಕರ್ನಾಟಕದ ಚರಿತೆ, ತಿಳಿಸುವೆ ಕಪ್ಪು ಮಣ್ಣು ನಾಡಿನ ಘನತೆ, ಇಲ್ಲಿನ ಕನ್ನಡಿಗರ ಮನಸ್ಸಿನ ಪರಿಶುದ್ಧತೆ.. ಬಳಸಬೇಕು ಕಂದ ನಾವು ಕನ್ನಡವ, ಗೊತ್ತೇನು ನಮ್ಮ ಕನ್ನಡ ಭಾಷೆಯ ಕಲರವ, ಅನ್ಯಭಾಷಿಕರು ಹೇರಿದರೆ ಪರಭಾಷೆ ಪದರವ, ಕನ್ನಡಿಗರೆಲ್ಲಾ ಸೇರಿ ಅವರ ಮೈ ಚಳಿ ಬಿಡಿಸುವ... ಒಂದು ಕಡೆ ಅಬ್ಬರದ ಸಮುದ್ರದ ಅಲೆ, ಮತ್ತೊಂದು ಕಡೆ ಸಾಲುಗಟ್ಟಿರುವ ಸಹ್ಯಾದ್ರಿಯ ಮಲೆ, ಯಕ್ಷಗಾನ ನನ್ನ ರಾಜ್ಯದ ಕಲೆ, ಪುಣ್ಯ ಮಾಡಿದ್ದೆ ನಾನು ಪಡೆಯಲು ಈ ಕನ್ನಡದ ನೆಲೆ...

----------------------------------

ನೋಂದಣಿ ಐಡಿ : KPFS2-2268

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top