Submission 7162

ನನ್ನವಳು

ರಚನೆ : ಈರಣ್ಣ ಶಿವಯ್ಯ ಪೂಜಾರ್

----------------------------------

ಶ್ರೀಗಂಧದ ಸುಧೆ ಇವಳು, ಶೃಂಗಾರಕೆ ಹೆಸರಿವಳು! ಕಾಡುವ ಕನಸಿವಳು; ಕಣ್ಣೆದುರೇ ನಿಲ್ಲುವಳು! ಪ್ರೀತಿಯ ಮುಂಗಾರಿನಂತೆ, ಸುರಿವ ಮಳೆಯಿವಳು ಎಲೆಗಪ್ಪಿದ ನೀರಂತೆ, ಇಬ್ಬನಿಯ ಮಗಳಿವಳು! ಎಳೆಬಿಸಿಲ ಕೆಂಪಂತೆ, ಮುಂಜಾವಿನ ಬೆಳಕಿವಳು ಕಾನನದ ಇಂಪಂತೆ, ಕೋಗಿಲೆಯ ದನಿಯವಳು! ಹಸಿರಾದ ಭುವಿಯಂತೆ, ಬಳುಕುವ ತೆನೆಯಿವಳು ಬಣ್ಣಗಳೇ ಇವಳದಂತೆ, ಹೂದೋಟವ ಹೋಲುವಳು! ಹೆಜ್ಜೆಗಿವಳೇ ಗುರುತಂತೆ, ಕುಣಿವ ನವಿಲಿವಳು ಹುಣ್ಣಿಮೆಯ ರಾತ್ರಿಯಂತೆ, ಬೆಳದಿಂಗಳ ನಗೆಯವಳು! ನೀಲಿಯ ಬಾನಂತೆ, ತಿಳಿಯ ಮನದವಳು ತವಕದ ಅಲೆಯಂತೆ, ದಡ ತಬ್ಬುವ ಕಡಲಿವಳು! ತಂಪಾದ ಗಾಳಿಯಂತೆ, ನನ್ನ ಉಸಿರಲ್ಲೇ ಬೆರೆತಿಹಳು ಗುಡಿಯ ಕಳಶದಂತೆ, ನನ್ನ ಬಾಳಿನ ಜೊತೆಯಿವಳು ನನಗಾಗೇ ಬಂದವಳು..!

----------------------------------

ನೋಂದಣಿ ಐಡಿ : KPFS2-2180

1
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top