ಏಕಾಂತದ ಒಗಟು
ರಚನೆ : ಬಸವರಾಜ್ ಎಂ.ಸಿ.
----------------------------------
ನವ ವಸಂತದ ಬಾನು, ಹಳೆಯ ಚಾಮರದ ಭೂಮಿ ಅಳಿದಿತೇನು ಇವರಿಬ್ಬರ ಗೆಳೆತನವ...? ಹೊಸದಾಗಿ ರೂಪುಗೊಂಡ ಯೋಜನೆ, ಮತ್ತದೇ ಹಳೆ ತೀರದ ಯೋಚನೆ, ಎರಡರಲ್ಲೂ ಬೇರೇನಿದೆ ಉಪ್ಪಿನ ಅಂಟು ! ಕಡುಕೋಪದಿ ಹೊಳೆವ ಕೆಂಬಣ್ಣದ ಸೂರ್ಯನಿಗೂ, ತಂಪು ಸೂಸುವ ಶ್ವೇತವರ್ಣದ ಚಂದ್ರನಿಗೂ ಇಹುದಂತೆ ಬಿಡಿಸಲಾಗದ ಹಳೆ ನಂಟು..! ಕೂತು ಯೋಚಿಸು, ಮರಳಿ ಅನುಸರಿಸು ನೆನಪಾದಾಗ ಮರುಕಳಿಸು ಎಲ್ಲದಕ್ಕೂ ಉತ್ತರವು ನಿನ್ನಲ್ಲೇ ಉಂಟು !
----------------------------------
ನೋಂದಣಿ ಐಡಿ : KPFS2-2107