Submission 7044

ಎನ್ನ ತಾರೆ

ರಚನೆ : ವಿನಯಕುಮಾರ ಎಚ್.ಐ

----------------------------------

ನಗುವಿನಲಿ ಮಗುವಿನ ಪ್ರೀತಿಯ ಧಾರೆ ಎರೆವ ಧೀರೆ ಭೀತಿಯ ಬಿಡಿಸಿ ಕೈಗೊಂಡೆ ನೀ ನನ್ನ ಮನಸೂರೆ ಒಪ್ಪಿಕೊಂಡಂತಾಗಿ ಮನದಲಿ ಅಪ್ಪಿದೆ ನಾ ನಿನ್ನ ಮನಸಾರೆ ಎನ್ನಯ ಹೃದಯದಲಿ ಉಕ್ಕಿತು ಪ್ರೇಮ ಸಾಗರದ ನೆರೆ || ಅಲೆಮಾರಿಯಂತಿದ್ದ ಮನವು ಒಕ್ಕಿತು ನಿನ್ನಯ ಪ್ರಿತಿಯ ಸೆರೆ ಬದುಕಿನ ಬಂಡಿಯು ಸಾಗಲು ಹಾಕಿದೆ ನೀ ನೀತಿಯ ಗೆರೆ ಹೊರಲು ಬೋರಲಾಗಿಸಿತು ಜವಾಬ್ದಾರಿಯ ಬಾರಿ ಹೊರೆ ಬದ್ಧವಾಗಿ ಬುದ್ಧನಂತೆ ನೆಲೆಯೂರಲು ಪ್ರೇರಣೆಯು ಈ ಧರೆ || ಅವಶ್ಯದಂತೆ ಭವಿಷ್ಯಕೆ ಸಾಗಲು ಸೂಚಕವು ತೊರೆ ಸಾವಕಾಶವಾಗಿ ಸಾಗಿಸಲು ಹೋದೆ ನಾ ಜೀವನದ ಮೊರೆ ಏಳುಬೀಳಿನ ದಾರಿಯ ಸಾಗಿ ತಪ್ಪಿಸಿದೆ ಸೊಲಿನ ಬರೆ ಸಂಕಟದಲೂ ಜೊತೆಯಾಗಿ ನಿಂತು ಬಂಟನಾಗಿಸಿದಳು ಎನ್ನತಾರೆ ||

----------------------------------

ನೋಂದಣಿ ಐಡಿ : KPFS2-2078

0
Votes
120
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top