Submission 6836

ಬದುಕು ಬಂಗಾರವಿರಲಿ

ರಚನೆ : ಬುದ್ದಿನ್ನಿ ತುಳಜರಾವ್ ನಾಯಕ್

----------------------------------

ಬದುಕರಿತು ಸಾಗಿದರೆ ಕೊಂಡೊಯ್ವದು ದಡಕೆ, ಭ್ರಮೆ ಬದುಕಿನಲಿ ಓಡಿದರೆ ಒಯ್ವದು ಕಂದಕಕೆ, ಬದ್ಕು ಓಡ್ವ ಚಕ್ಕಡಿ ಎಚ್ಛರ ತಪ್ಪಿದರೆ ಮಸಣಕೆ, ಬದುಕು ಬಂಗಾರವಿರಲಿ ಚಿಮ್ಮುವದದು ಕ್ಷಿತಿಜಕೆ. !! 1 !! ಓಡುತೋಡುತ ಸತ್ತು ಬದುಕುವ ಕಲ್ಪನೆ ಬಿಡಲಿ, ಆಡಿ ಪಾಡಿ ನಲುಮೆಯದೀ ಅನುಭವಿಸುತಲಿರಲಿ, ಸಜ್ಜನರ ಸಂಗವ ಮಾಡಿ ಒಲುಮೆ ಪಡೆಯುತಿರಲಿ, ಜಗದ ಜೊತೆ ಅನುಬಂಧದಾ ಸಿಹಿ ಸಂಗತವಿರಲಿ. !! 2 !! ಅರಿಯದನು ಎಳೆದುಕೊಳ್ಳ ಬೇಡವೋ ಜೋಕೆ, ಅರಿತರಿತು ಸಾಗುತಾ ಸಂಯಮದಿ ಸೇರು ತಾಳಕೆ, ಅರಿವೆಂಬ ವಸ್ತ್ರವು ಶುಭ್ರವಾಗಿರಲಿ ಸುಖ ಜೀವಕೆ, ಅರಿವಿತ್ತ ಮಹಾದೇವನಿಗೆ ತಲೆ ಬಾಗವನ ಭಿಕ್ಷಕೆ. !! 3 !!

----------------------------------

ನೋಂದಣಿ ಐಡಿ : KPFS2-9912

0
Votes
125
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top