ಬಾಳ ಬೆಳಗು
ರಚನೆ : ಗೀತಾ ಕುಲಕರ್ಣಿ
----------------------------------
ನನ್ನ ಹೃದಯದ ಹಣತೆಯಾಗಿ ನನ್ನ ಬಾಳಗುಡಿಯ ಬೆಳಗು ಬಾ || ನೀ ಬರಲು ಹೊಂಬೆಳಕು ಮೂಡುವುದು ಇರುಳು ಸರಿದು ನನ್ನ ಕಂಗಳಲ್ಲಿ ನಿನ್ನ ಪ್ರತಿಬಿಂಬ ತುಂಬಿ ತುಳುಕುವ ಒಲವ ಸೆಲೆಯು || ಎನ್ನ ಎದೆಯ ಅಂಗಳದಿ ಕಸವಗೂಡಿಸಿ ಪ್ರೀತಿ ರಂಗೋಲಿ ಚಿತ್ತಾರ ಬರೆದು ಬಣ್ಣ ಬಣ್ದದ ಕನಸು ತುಂಬಿ ಶೃಂಗರಿಸುವ ಬಾ || ತುಸು ತಂಗಾಳಿಗೆ ಮುಂಗುರುಳು ತೂಗಿ ಕೆನ್ನೆ ಮುತ್ತಿಡಲು ನಿನ್ನೆಯ ವದನವು ಕೆಂಪಾಗಿ ರಂಗೇರಿದೆ ||
----------------------------------
ನೋಂದಣಿ ಐಡಿ : KPFS2-9909