Submission 6798

ಕತ್ತಲ ಛಾಯೆ..

ರಚನೆ : ಪೂರ್ಣಿಮಾ ಜೋಶಿ

----------------------------------

ಸುತ್ತಲೂ ಕಾನನದಿ.., ಮತ್ತೆ ಗಳಿಗೆಯ ನೆವದಿ ಕತ್ತೆತ್ತಿದರಲ್ಲಿ ಕತ್ತಲ ಛಾಯೆಯ ಗರಿ! ಕಮರಿದ ಕನಸುಗಳ ನೆತ್ತಿ ಮೇಲಿನ ಭಾರ! ಕಿರಿದಾದ ಜೀವಕೆ ಆಸೆಗಳು ದೂರ..ನೋವ ನೂಲಿನ ದಾರ! ತುತ್ತು ತುತ್ತಿಗೂ ನಿಲುಕದ ಹತ್ತಾರು ಹತಾಶೆಗಳು! ಕೊತ್ತ ಕೊನೆಯಲ್ಲಿ ಬುಡವೆಲ್ಲಿ?! ಬೆತ್ತಲೆಯ ಜಗಕಿಲ್ಲಿ ಮುಚ್ಚಳಿಕೆಯ ಭಯವಿಲ್ಲ! ಒತ್ತಾಸೆಗಾದರೂ ಜೊತೆಯಿಲ್ಲ! ಬತ್ತಳಿಕೆಯಲ್ಲಿ ಬರಿದಾಗದ ನೆನಪುಗಳ ಬುತ್ತಿಗಳಲ್ಲಿ ಕಳೆದು ಹೋಗುವ ಪರಿಗೆ ಹಾಡೊಂದು ನೆನಪಾ ನೆಪವಾ...? ಕಿತ್ತು ತಿನ್ನುವ ಕರುಡು ಅರ್ಥವಿಲ್ಲದ ಬದುಕು!! ನೆತ್ತರ ಧಾರೆಯಲಿ ನರ್ತಿಸುವ ಕಿಚ್ಚು! ಪುಸ್ತಕದಿ ಗೀಚಲಿಕೆ ಸುಸ್ತಾದೀತು ಸತ್ತ ಪ್ರೇಮ ಕವಿತೆಯ! ಅತ್ತು ಅತ್ತು ಕೆಂಪಾದ ಕಂಗಳಿಗೆ ಕಾಣದ ಸಾಂತ್ವನ! ಅದಕ್ಕೊಂದು ಅನುವೇ ಅಪ್ಯಾಯವೇ!

----------------------------------

ನೋಂದಣಿ ಐಡಿ : KPFS2-9886

0
Votes
91
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top