ಕರಗಿರೋ ಮುಗಿಲನು
ರಚನೆ : ತಿಲಕ್ ಹೆಚ್ ಸಿ
----------------------------------
ಕಾಣದಿರುವ ಕಡಲಿನಲ್ಲಿ ಒಡಲು ತುಂಬಿ ಬಂದಂತೆ ತೀರ ಹುಡುಕಿ ಹೊರಟ ಮನವು ಮರಳಿ ಏಕೋ ಬರದಂತೆ ಆವಿಯಾದ ಮರುಳು,ಸುಳಿವು ಕೊಡದ ಸಿಡಿಲು ಬತ್ತಿಹೋದ ಮಡಿಲಿನಲ್ಲಿ ಕೂಗುತಿದೆ ಕೊರಳು || ಕರಗಿರೋ ಮುಗಿಲನು ನೋಡಿವೆ ಈ ಕಣ್ಣುಗಳು ಕಿರಣವಿರದ ಕನಸಿನಲ್ಲಿ ಇರುವುದೇ ಕತ್ತಲು|| ಪಂಜರದ ಹಕ್ಕಿ ಗೂಡು ಸೇರಲು ನೋಡುತ್ತಿದೆ ಯಾರು ಕಾಣದ ದಾರಿಯಲ್ಲಿ ಕಾಯುತಿದೆ ತೃಪ್ತಿ ಇರದ ಜನುಮವಿದು ಮನಸೊಂದು ಹಾಳು ಸಂತೆ ಹೃದಯ ನಗೆ ಬೀರಲೇ ಇಲ್ಲ ಮಗುವಿನ ನಗುವಂತೆ ಯಾವ ಅಳಿವಿನ ಸುಳಿಗೆ ಸಿಲುಕಿ ಕಾಣದಾಯಿತು ಜೀವನ ದೋಣಿ ಯಾವ ಅಲೆಗಳ ಮಧ್ಯೆ ಸಿಲುಕಿ ಮರೆಯಾಯಿತು ಮೌನದಿ ಮನಸೇರೋ ಮುನ್ನ ಮುನಿಸಿ ಖುಷಿಯೆಲ್ಲ ಹಿಂದೆ ಸರಿಸಿ ವಿಧಿಯ ಜ್ವಾಲೆಗೆ ದಹಿಸಿಹೋಗಿವೆ ಮನದ ಭಾವನೆ
----------------------------------
ನೋಂದಣಿ ಐಡಿ : KPFS2-9881