Submission 6478

ಬೆರಳುಗಳು

ರಚನೆ : ಲೋಕೇಶ್ವರಿ ಜತಿನ್ ನಾಯಕರ್

----------------------------------

ಬಿಡಿಸಿಕೊಳ್ಳುತ್ತವೆ ಹಿಡಿದ ಬೆರಳುಗಳು ಕೆಲವೊಮ್ಮೆ ಮೃದುವಾಗಿ ಇನ್ನೊಮ್ಮೆ ಒರಟಾಗಿ ಬಿಟ್ಟುಹೋಗುತ್ತವೆ ಬೆರಳುಗಳು ಒಮ್ಮೊಮ್ಮೆ ಜೀವನದ ಸಂತೆ - ಗದ್ದಲದಲ್ಲಿ ಅಂಗೈ ಪಸೆ ಒರೆಸುಕೊಳ್ಳುವ ನೆಪದಲ್ಲಿ ಬಿಡುವ ಮನಸಿದ್ದರೂ ಪ್ರೀತಿ ಇಲ್ಲದ ಹಿಡಿಯುವಿಕೆ ಕೆಲ ಕಿರುಬೆರಳುಗಳ ಅನಿವಾರ್ಯತೆ ತೋರಬೆರಳು ಹಿಡಿದು ನಡೆದ ಕಾಲುಗಳು ದೂರ ಸಾಗುತ್ತವೆ ಇನ್ನೊಂದು ಬೆರಳು ಹಿಡಿದು ಬದುಕು ಕಟ್ಟುತ್ತವೆ ನಾ ಮೇಲು ನಾನೇಕೆ ಹಿಡಿಯಲಿ ನಾನೇನು ಕಡಿಮೆಯೇ ಹಿಡಿದ ಕೆಲ ಬೆರಳುಗಳು ಸಡಿಲಗೊಳ್ಳುತ್ತವೆ ಪ್ರತಿಷ್ಠೆಯಲಿ

----------------------------------

ನೋಂದಣಿ ಐಡಿ : KPFS2-9631

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top