ಮುಂಜಾವಿನ ಐಸಿರಿ
ರಚನೆ : ಅರ್ಪಿತಾ ಎಸ್
----------------------------------
ಮುಂಜಾನೆಯ ಬಿಸಿ ಉಸಿರಿನಲಿ ತಣ್ಣನೆಯ ತಿಳಿ ಗಾಳಿಯಲಿ ಮೂಡಣದಿ ಮೂಡಿದ ಕಿರಣಗಳಲಿ ಹೊಸ ಹುರುಪನು ನೀಡಿದವನಾರೆ? ಪುಟ್ಟ ಪುಟ್ಟ ಹೊಂಗನಸುಗಳಲಿ ಹುಸಿ ಕೋಪದ ಚಡಪಡಿಕೆಯಲಿ ಅಮ್ಮನ ಅಕ್ಕರೆಯ ಸವಿನುಡಿಯಲಿ ಸಮಯದ ಪಾಠವ ತಿಳಿ ಹೇಳುವವನಾರೆ? ಬೆವರ ಹನಿಯ ಬೇಗೆಯಲಿ ಕನಸ ಹೊತ್ತ ನೌಕೆಯಲಿ ನಾಳಿನ ಹೊಂಗಿರಣದ ಪುಟಗಳಲಿ ಬೆಳಕ ಬೀರಿ ನಲಿವವನಾರೆ?
----------------------------------
ನೋಂದಣಿ ಐಡಿ : KPFS2-9605