ತಾಯಿ
ರಚನೆ : ದೀಪಕ್ ರಾವ್
----------------------------------
ಜನ್ಮ ಕೊಟ್ಟು ಉಸಿರನಿಟ್ಟು ಲಾಲಿ ಹಾಡಿದವಳು ಅನ್ನವಿಟ್ಟು ಪ್ರೀತಿ ಕೊಟ್ಟು ನಿಮ್ಮ ಸಲಹಿದವಳು ಚಿನ್ನ ರನ್ನ ಎoದು ಕರೆದು ಮುದ್ದು ಮಾಡಿದವಳು ನಿದ್ದೆಗೆಟ್ಟು ಒದ್ದೆಯುಟ್ಟು ಗುಡಿಯ ಸುತ್ತಿದವಳು ನುಡಿಯ ಕಲಿಸಿ ಅಕ್ಷರ ಬರಸಿ ವಿದ್ಯೆ ನೀಡಿದವಳು ಹಿಡಿದು ಕೈಯ ನಡೆಸಿ ಮು೦ದೆ ದಾರಿ ತೋರಿದವಳು ಹೊನ್ನು ಹಣವನು ಕೂಡಿ ಕಳೆದು ಎಲ್ಲ ಉಳಿಸಿದವಳು ತನ್ನತನವ ಮತ್ತೆ ಮರೆತು ಕೊಟ್ಟು ಬೆಳಸಿದವಳು ನಮ್ಮ ಜೊತೆಗೆ ತಾನೂ ನಲಿದು ಹೆಜ್ಜೆ ಹಾಕಿದವಳು ಅಮ್ಮ ಎoದು ಕರೆಸಿಕೊoಡು ಹಿಗ್ಗಿ ಹೀರಿದವಳು ಬೆಳೆದು ನಿoತ ಬಾಲ್ಯ ನೋಡಿ ತುoಬು ಹರಸಿದವಳು ಅಳೆದು ಸುರಿದು ನಿಮ್ಮ ಏಳಿಗೆ ಸಾರಿ ಹೇಳಿದವಳು ಇಷ್ಟು ಋಣವನು ಎಷ್ಟು ಜನುಮದಿ ತೀರಿಸಬಲ್ಲಿರಿ? ಅಷ್ಟೊ ಇಷ್ಟೊ ಜೀವ ಮಿಡಿವಾಗ ಸಾಕಿ ಸಲಹಿರಿ
----------------------------------
ನೋಂದಣಿ ಐಡಿ : KPFS2-9500