Submission 6264

ನಾನ್ಯಾರು?

ರಚನೆ : ಆಶಾ ಹೊಳೆಬಸು ಮಾಚಕನೂರ

----------------------------------

ಕತ್ತಲ ರಾತ್ರಿಯಲ್ಲಿ ಕನವರಿಸಿದವಳು... ಬೀರಿವ ಬೆಳಕಿನಂತೆ ನೊಂದವಳು... ನನಸಾಗದ ಕನಸ್ಸುಗಳೊಂದಿಗೆ ಸತ್ತವಳು.. ಬಿಕ್ಕಳಿಸಿ ಬೆಕ್ಕಿನಂತೆ ನಲುಗಿದವಳು... ಸಮಾಜದ ಕಣ್ಣಲ್ಲಿ ಶಿಲೆಯಾದವಳು... ಹೃದಯವೇ ಹರಿಯುವಂತೆ ಅತ್ತವಳು.. ಅಬಲೆಯಾಗಿ ನನ್ನಲ್ಲೇ ನಾ ಸತ್ತವಳು.... ಮೌನದ ಜೊತೆ ಯುದ್ಧ ಕೈದಿಯಾದವಳು. ನಗುವಿನೊಂದಿಗೆ ಮುನಿಸಿಕೊಂಡವಳು.. ಹೆಣ್ಣೆಂಬ ಧೋರಣೆ ಹೊತ್ತು ನಲುಗಿದವಳು. ಮುಸುಕಿನ ಮಬ್ಬಿನಲಿ ಸೋಲುಗಳೊಂದಿಗೆ ಗುದ್ದಾಡಿದವಳು... ಕುಕ್ಕಿ ತಿನ್ನುವವರ ಮಧ್ಯೆ ಕರಗದ ಶಿಲೆಯಾದವಳು...

----------------------------------

ನೋಂದಣಿ ಐಡಿ : KPFS2-9459

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top