ಇದೇನಾ ಪ್ರೀತಿ ಅಂದ್ರೆ.!?
ರಚನೆ : ಮೇಘನಕೃಷ್ಣ
----------------------------------
ದಿನಾ ನಿನ್ನ ಕಾಣುವ ಹಂಬಲಕ್ಕೆ ಪ್ರೀತಿ ಎನ್ನಲೇ..? ನಿನ್ನ ಕಂಡಾಗ ಆಗುವ ತವಕಕ್ಕೆ ಪ್ರೀತಿ ಎನ್ನಲೇ..!? ನಿನ್ನ ನಗಿಸುವ ಪ್ರಯತ್ನಕ್ಕೆ ಪ್ರೀತಿ ಎನ್ನಲೇ..!? ನೀ ನಕ್ಕಾಗ ನನ್ನ ಮುಖದಲ್ಲಿ ಮೂಡುವ ಮುಗುಳುನಗೆ ಪ್ರೀತಿ ಎನ್ನಲೇ !? ಇನ್ನೋಬೊರಿಟ್ಟಿಗಿನ ನಿನ್ನ ಒಡನಾಟದಿಂದ ಆಗುವ ಹಿಂಗಾರಿಗೆ ಪ್ರೀತಿ ಎನ್ನಲೇ..!? ಮನದಲ್ಲಿ ನಿನ್ನ ನಿರಂತರ ಆಲೋಚನೆಗೆ ಪ್ರೀತಿ ಎನ್ನಲೇ..!? ನೀನೊಂದಿಗಿನ ಸಪ್ತಪದಿ ತುಳಿಯುವ ಬಯಕೆಗೆ ಪ್ರೀತಿ ಎನ್ನಲೇ..!? ಪ್ರೀತಿ ಎಂದರೇನು ಎಂದು ಕೇಳಿದೆಯಲ್ಲಾ!?? ಅಂತ್ಯವಿಲ್ಲದ ನಿನ್ನ ಜೊತೆಗಿನ ಪಯಣಕ್ಕೆ ಪ್ರೀತಿ ಎನ್ನಲೇ..!?
----------------------------------
ನೋಂದಣಿ ಐಡಿ : KPFS2-9362