Submission 6094

ತಯಾರಿ

ರಚನೆ : ವಿನೀತ ಹವಳದ

----------------------------------

ಹೇಗೆ ಶುರು ಮಾಡಲಿ ತಯಾರಿ ತೊರೆಯಲು ನನ್ನವರ ಜೊತೆ ಸವಾರಿ ಕಾಯುತ ಮಳೆಗೆ ಮರುಭೂಮಿಯಲಿ ಬಾಯಾರಿ ಬೇಡುತ ಮಳೆಯೇ ಬರದಿರಲಿ ತಪ್ಪಿದಾರಿ ಕಡಲ ತೀರದ ಮರಳು ಕಾಲ ಸುಡಲು ನಡೆಯುತ ತಂಪು ನೀರಲಿ ತಡೆಯಲು ನೆನಪಿನ ಗಾಯದ ನೋವು ಉಪ್ಪುನೀರಲಿ ಉರಿಯಲು ಕಾಲು ಕೂಗಲು,ಬಾಯಿ ಬಾರದು,ಕಣ್ಣೀರಲಿ ಮುಳುಗಿರಲು ಕೂಡಿ ಕಳೆದ ಕಾಲದ ಕ್ಷಣಗಳ ಕೊರೆದಿರಲು ಮರಳ ಮೇಲೆ ಮರಳಿ ಬರುವ ಅಲೆ ಮರೆಯಿಸಲು ತಿಳು ನೀರಲಿ ಹೊಳೆವ ಮರಳು ಮುಗಿಯದ ಸಮುದ್ರ ತುದಿಯೇ ಹಾದಿ ಅಳು ಬರಲಿ ಬಾರದಿರಲಿ ಇರುಳು ಮುಗಿಯದ ಸದಾಸಂಜೆ ನಡೆಯುತಲೇ ಕೈದಿ

----------------------------------

ನೋಂದಣಿ ಐಡಿ : KPFS2-9319

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top