Submission 6050

ತಾಯಿ ಭುವನೇಶ್ವರಿಗೆ ನನ್ನ ನಮನ

ರಚನೆ : ರಂಜನಾ

----------------------------------

ಸಾಗುತಿದೆ ಹರಿವ ನೀರಿನಂತೆ ಕಾಣುತಿದೆ ಕಡಲ ತೀರದಂತೆ ಪಸರಿಸಿದೆ ದಟ್ಟಣೆಯ ಕಾಡಂತೆ ಕನ್ನಡ ಭಾಷೆ ಸವಿ ನುಡಿ ಮುತ್ತಿನಂತೆ. ಸುತ್ತಲೂ ನಡೆಯುತ್ತಿದೆ ಭಾಷೆಗಳ ಕಾದಾಟ ಸಿಲುಕಿ ನರಳುತ್ತಿದೆ ಮುಸುಕಿನ ಗುದ್ದಾಟ ಸಾಕುಮಾಡು , ತಿಳಿದು ನೋಡು ನಮ್ಮಿ ಸಂಸ್ಕೃತಿ, ಕಲೆ ಮತ್ತು ಇತಿಹಾಸದ ಬೀಡು ನೊಂದು ಬೆಂದರು ಯಾರಿಗೂ ಬಗ್ಗುತಿಲ್ಲ ನಮ್ಮಿ ತಾಯ್ನಾಡು. ದೇಶದಾಚೆ ಕನ್ನಡದ ಹೆಸರಿದೆ ಎಲ್ಲರನ್ನು ಪ್ರೀತಿಸುವ ಗುಣವಿದೆ ನಮಿಸುವೆ ಪ್ರೀತಿಸುವೆ ಈ ಕರುನಾಡನ್ನು ಮತ್ತೆ -ಮತ್ತೆ ಹುಟ್ಟಿ ಬಂದು ಪೂಜಿಸುವೆ ಈ ಮಣ್ಣನ್ನು.

----------------------------------

ನೋಂದಣಿ ಐಡಿ : KPFS2-9284

0
Votes
104
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top