Submission 5804

ಹಬ್ಬಗಳ ಮೆರವಣಿಗೆ

ರಚನೆ : ಆರತಿ ಪ್ರದೀಪ್. ಹೆಚ್

----------------------------------

ಅರಿತ ಜೀವಗಳ ಬಾಳು ಬೇವು ಬೆಲ್ಲದ ಯುಗಾದಿ ಒಲವ ಸವಿಗಾನಕೆ ನಾಂದಿಯಾಗಲಿ ದಿವ್ಯ ಸಪ್ತಪದಿ ನೀನೆಂದರೆ ಹಬ್ಬಗಳ ಮೆರವಣಿಗೆ ಹೊತ್ತ ಶ್ರಾವಣ ನಿನ್ನೊಟ್ಟಿಗಿದ್ದಾಗ ಅನುಕ್ಷಣ ಸವಿದ ಹಾಗೆ ಹೂರಣ ಭಾವ ಜೋಕಾಲಿಗೆ ತುಂಬಿಸೋಣ ತಂಬಿಟ್ಟಿನ ಸಿಹಿ ಒಲಿದ ಬದುಕಲಿ ಮೆರೆಯೋಣ ಮರೆಯುತ್ತ ಕಹಿ ಸಲ್ಲಿಸುವೆ ನಿನ್ನಲ್ಲಿ ನನ್ನದೊಂದು ಚೆಂದದ ಕೋರಿಕೆ ಒಂದಾಗಿ ಹಾರಿಸೋಣ ವಿಜಯದಶಮಿಯ ಪತಾಕೆ ಕಲೆತ ಕಂಗಳಲಿ ಹರ್ಷದಿ ಚಿಮ್ಮಿಸೋಣ ದೀಪಾವಳಿ ಅದು ಕಣ್ಣಮಿಂಚಲ್ಲಿ ಹೊಮ್ಮುವ ಒಲವ ಪ್ರಭಾವಳಿ ಬೇಕಿದೆ ಒಲವ ದೋಣಿಗೆ ನಿನ್ನಾಸರೆಯ ಸಂಕ್ರಾಂತಿ ಸ್ವೀಕರಿಸು ಸಂಭ್ರಮದಿ ಬಾಳ ದೀವಿಗೆಯ ಸಂಪ್ರೀತಿ

----------------------------------

ನೋಂದಣಿ ಐಡಿ : KPFS2-9094

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top