Submission 5598

ಕವಿತೆಯ ಸಾಲು

ರಚನೆ : ವಿಜಯಲಕ್ಷ್ಮೀ

----------------------------------

ಹೊರಟಿವೆ ಅಕ್ಷರಗಳ ರಥ ಪದ ಪದಗಳಾಗಿ ಪೋಣಿಸಲು ಸುತ್ತ ನಸು ನಕ್ಕು ನಗೆಯಾಡಿದೆ ಪ್ರತಿ ಪದವು ತನ್ನ ಬಳಿ ಯಾರು ಬರುವವರೆಂದು ಓಹೋ.. ಆಗಿಯೇ ಬಿಟ್ಟಿತ್ತಲ್ಲಾ ಕವಿತೆಯ ಸಾಲು ಯಾರಿದು ಪದಗಳ ಪೋಣಿಸಿದಾತನೆನುತ, ಪ್ರತಿ ಸಾಲು ಮೇಲೆ ಕೇಳಗೊಮ್ಮೆ ತಿರುಗಿ ನೋಡಿ ಸಂತಸ ಸಂಭ್ರಮ ತನ್ನ ಬಳಗವ ನೋಡಿ ಆದರೂ ಕವಿತೆಯ ಸಾಲಿಗೆ ಮನದಲ್ಲೇ ಅಳುಕ ಕವಿಯೇನೋ ನನ್ನ ತಿದ್ದಿ ತೀಡಿ ಬರೆದೆ ಬಿಟ್ಟ ಆದರೆ.., ಓದುವ ಮನಗಳು ಯಾರಿದ್ದಾರೆಂದು?

----------------------------------

ನೋಂದಣಿ ಐಡಿ : KPFS2-8965

0
Votes
105
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top