Submission 5576

ಅಪರೂಪದ ಗುಬ್ಬಿ

ರಚನೆ : ಲೋಕಮಾತೆ ಎಸ್ ಆರ್

----------------------------------

ಹೇ ಗುಬ್ಬಿ ಚಿಂವ್ ಚಿಂವ್ ಗುಬ್ಬಿ, ಅಕ್ಕಿಯನ್ನು ಹೆಕ್ಕಿ ಹೆಕ್ಕಿ ತಿನ್ನುವ ಗುಬ್ಬಿ, ನಿನ್ನ ಸಂಗೀತ ಕಚೇರಿಯಿಂದಲೇ ಅಂದಿನ ನಮ್ಮ ಮುಂಜಾನೆ ಶುರುವಾಗುತ್ತಿತ್ತು ರೇಡಿಯೋ ತರಂಗಗಳಿಗೆ ತುತ್ತಾಗಿ ಅಪರೂಪದಲ್ಲೇ ಅಪರೂಪವಾದೆಯಲ್ಲೇ ಮರಿ ಗುಬ್ಬಿ ? ಪ್ರತ್ಯಕ್ಷವಾಗಿಯೇ ನಿನ್ನ ಸೊಬಗ ಸವೆಯುತ್ತಿದ್ದೆವಲ್ಲೆ ಮಾನವನ ಅತೀ ಬುದ್ದಿವಂತಿಕೆಗೆ ನಿಮ್ಮ ಸಂಕುಲವು ಸಿಕ್ಕಿ ಅಳಿವಿನಂಚಿಗೆ ತಲುಪಿದಿಯೇ ಮುಂದಿನ ಪೀಳಿಗೆಗೆ ನೀ ಬರೀ ಭಾವಚಿತ್ರವಾಗುವೆಯೇನೋ ಅವನ ಸ್ವಾರ್ಥಕ್ಕಾಗಿ ನಿಮ್ಮನ್ನೆಲ್ಲಾ ಸಾವಿಗೀಡು ಮಾಡಿ ತಾನೇ ಅತಿ ಬುದ್ದಿವಂತನೆಂದು ಬೀಗುತಲಿರುವವನಿಗೆ ನನ್ನ ಬಹಿಷ್ಕಾರವಿರಲಿ ಎಂದು ಶಾಪವನ್ನಿತ್ತೆಯಲ್ಲೇ ಅಪರೂಪದಲ್ಲೇ ಅಪರೂಪವಾದೆಯಲ್ಲೇ ಮರಿ ಗುಬ್ಬಿ,

----------------------------------

ನೋಂದಣಿ ಐಡಿ : KPFS2-8951

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top