ನನ್ನ ದಾರಿ ಎಲ್ಲಿಗೆ? ನಾನೊಬ್ಬ ರೈತ
ರಚನೆ : ಪ್ರಕಾಶ್ ಸಿ ಬಿ
----------------------------------
ಗುರಿಯಿಲ್ಲದ ದಿಕ್ಕಿನಡೆಗೆ ನನ್ನ ಪಯಣ, ಕಳೆದೇ ಹೋಯಿತು ನನ್ನ ಅರ್ಧ ಜೀವನ. ಓದಿಲ್ಲ, ಬರೆದಿಲ್ಲ — ನಾನೊಬ್ಬ ರೈತ. ಮಳೆ ಇಲ್ಲ, ಬೆಳೆ ಇಲ್ಲ ಕಾಲಕಾಲಕ್ಕೆ; ಆಸೆಗೇನು ಕಮ್ಮಿ ಇಲ್ಲ ಜೀವನಕ್ಕೆ. ಮೂರು ಕಾಸು ದುಡಿದರೆ ಜೀವನ. ಮದುವೆ ಆಯ್ತು, ಮಕ್ಕಳಾಯ್ತು. ಓದಿದ ಮಕ್ಕಳೆಲ್ಲ ಪೇಟೆ ಸೇರಿದರು. ಮನೆ ಮೌನವಾಗಿ ಕೇಳುತ್ತಿದೆ ನನ್ನ ದಾರಿ ಎಲ್ಲಿಗೆ? ಹಸಿದಾಗ ಅನ್ನವಾಗಿ ನಿಂತಳು ಭೂಮಿತಾಯಿ, ದಣಿದಾಗ ನೆರಳಾಗಿ ಕಾಪಾಡಿದಳು ಅವಳು. ವಯಸ್ಸಾಯ್ತು... ದೇಹ ವಿಶ್ರಾಂತಿ ಕೇಳುತ್ತಿದೆ. ಬಲವಿಲ್ಲ ಕೈಗಳಲ್ಲಿ, ಕರೆದುಕೋ ನನ್ನ?
----------------------------------
ನೋಂದಣಿ ಐಡಿ : KPFS2-8812