Submission 5268

ಒಲವ ಮಾಮರದ ಹಕ್ಕಿ...

ರಚನೆ : ಶಿವಾನಂದ.ಆರ್

----------------------------------

ಸಾಗರ ತೀರದ ಕಥೆಯ, ಬಚ್ಚಿಡಲಾಗದು ಗೆಳೆಯ, ದಡ ಸೋಕೋ, ಅಲೆಗಳ ಮೇಲೆ, ಬರೆದಿಹೆನು ಒಲವಿನ ವ್ಯಥೆಯ, ಕಂಡ ಕನಸುಗಳು ನೂರಾರು, ಅದರೊಳಗಿನ ಆಸೆ ಸಾವಿರಾರು, ಆ ಕನಸೆಲ್ಲಾ, ನನಸಾಗೋ ಮುನ್ನವೇ, ವಿಧಿಯಾಟಕೆ ಆಸೆಗಳೆಲ್ಲಾ ನುಚ್ಚುನೂರು, ಆಡುವ ಮಾತು ಕ್ಷಣಿಕ, ಅದರ ನೋವು ನಿಮಗದೋ ಕುಹಕ, ಆ ನೋವು ನಿಮಗೆ ತಿಳಿಯುವುದು, ಮುಂದಾಗುವ, ಮುಸುಕಿನ ಗುದ್ದಾಟದ ಬಳಿಕ, ಮನದ ಮಾಮರದ ಒಲವಿನ ಹಕ್ಕಿ, ಹಾರುತಿಹುದು ರಂಗಿನ ರೆಕ್ಕೆಯ ಬಿಚ್ಚಿ, ತಿಳಿ ನೀಲಿ ಆಗಸ ತೀರದಿ, ಸಂತಸದಿ, ಆರದ ನಂದಾದೀಪವ ಹಚ್ಚಿ...

----------------------------------

ನೋಂದಣಿ ಐಡಿ : KPFS2-8732

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top