Submission 5104

ಚಂದಿತ್ತು ನನ್ನ ಕಾಲ

ರಚನೆ : ಸುಶ್ಮಿತಾ ಟಿ

----------------------------------

ಚಂದಿತ್ತು ನನ್ನ ಕಾಲ, ಚಂದಿರನ ತೋರಿ ಅವ್ವ ಕೈ ತುತ್ತು ಕೊಡುತ್ತಿದ್ದ ಕಾಲ, ಚೆಂದದ ಬಟ್ಟಿಯ ತೊಡದಿದ್ದರೂ ಚೆಂದಾಗಿ ಕೂಡಿ ಬಾಳುತ್ತಿದ್ದ ಕಾಲ. ಅಜ್ಜಿ ಸೊಗಸಾಗಿ ಸೋಗೆ ಗರಿಯ ಕೈ ಗಡಿಯಾರ ಮಾಡಿ ಕೊಡುತ್ತಿದ್ದ ಕಾಲ, ಅಜ್ಜನು ಹೊಲ ಉಳುವಾಗ ಬೆಕ್ಕಿನಂತೆ ಬೆಳ್ಳಕ್ಕಿಯ ಹಿಂದೆ ಓಡುತ್ತಿದ್ದ ಕಾಲ. ಚೆಂದಿತ್ತು ನನ್ನ ಕಾಲ, ಚೆನ್ನಕೇಶವನು ತೇರಲ್ಲಿ ಬರುವಾಗ, ಜಾತ್ರೆಯೊಳಹೊಕ್ಕು ಮಿಠಾಯಿ ಕದಿಯುತ್ತಿದ್ದ ಕಾಲ. ಹಳೆಯ ಸೂರು ಹತ್ತಾರು ಕಂಬಗಳ ಮೇಲೆ ನಿಂತು, ಸಾವಿರಾರು ಭಾವನೆಯ ಕೂಡಿ ಸುಖಿಸಿ ಬಾಳುತ್ತಿದ್ದ ಕಾಲ....

----------------------------------

ನೋಂದಣಿ ಐಡಿ : KPFS2-8608

0
Votes
102
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top