ನಾಟ್ಯದ ನವಿಲೆ
ರಚನೆ : ಲಕ್ಷ್ಮೀ ಎ. ಎಸ್
----------------------------------
ನಗುತಲಿರು ನವಿಲೆ , ನಲಿವ ನಾಟ್ಯದ ನವಿಲೆ ತುಟಿಗಳ ತೆರೆದರೆ ತಾವರೆಯು ಅರಳಿದಂತೆ ನಿನ್ನಯ ಮಾತುಗಳು ತಂಬೂರಿನಾದದಂತೆ ಸಾಗರದ ಮುತ್ತುಗಳ ಸಾಲಾಗಿ ಜೋಡಿಸಲು ನಿನದಂತ ಹೋಲುತ್ತಿದೆ ಮುದ್ದು ಮೊಗದವಳೆ . ಕೆಂಪದಾ ಕೆನ್ನೆಗಳು ಕೆಂಡ ಸಂಪಿಗೆಯಂತೆ ಹಾಲುಗಲದನೇರ ಮುದ್ದಾದ ಮುಗಂತೆ ಜೋಗದಾ ಜಲದಂತೆ ಕೇಶದ ಸೊಬಗು ಚಂದ್ರಿರನನ ಕರೆತಂದು ಹಣೆಗೆ ಸಿಂಧೂರ ಮಾಡಿ. ಮಲ್ಲಿಗೆಯ ಮನಸಲಿ ಮುದ್ದು ಮಾತಿರಲಿ ಹಂಸದಾ ನಡೆಯಲಿ ಸೊಬಗು ತುಂಬಿರಲಿ ಬಾನೆತ್ತರ ಭಾವನೆಗಳ ತುಂಬಿದಾ ಕಣ್ಣುಗಳು ಕವಿಯ ಮಾಡಿತು ನನ್ನ ಕಾಣದ ಮಾಯೆಯಲಿ ನಗುತಲಿರು ನವಿಲೆ , ನಲಿವ ನಾಟ್ಯದ ನವಿಲೆ
----------------------------------
ನೋಂದಣಿ ಐಡಿ : KPFS2-8534