Submission 4964

ಅಗ್ರಾಹ್ಯ

ರಚನೆ : ಭಾರ್ಗವ್ ವೈ

----------------------------------

ಷಷ್ಠಿ ಶಶಿಯಲಿ ಭಿನ್ನ ಭಾಗದಾ ಶೋಧದಲಿ ಸಂಕಲನ ಶಾಸ್ತ್ರಕೇ ಮನವಿಂದು ಬಯಸಿರಲು| ಕಣ್ಣಂಟು ಪೂರ್ಣದಾ ಪರಾರ್ಧವನು ಕಾಣುತಲಿ ಬೇರ್ಪಡದ ಬಂಧವನು ಕೂಡಿಸಲು ಕುಳಿತಿರಲು|| ವಿಚ್ಛಿನ್ನ ಸಾಂಗತ್ಯದಳತೆಯಲಿ ಅಂತರವು ತನ್ನಿರುವ ತೋರ್ಪಡಿಕೆಗೊಳಗಾಗಿ ಬಿಮ್ಮಿಸಲು| ಭೌತಿಕಾ ವಿರಹವನು ಆಂತರ್ಯದ್ಮಿಳಿತವನು ತುಲನೆಯಾ ತಕ್ಕಡಿಯಲಿದಿರಿದಿರು ನಿಲ್ಲಿಸಲು|| ಸಾಮಿಪ್ಯ ಸಾಂಗತ್ಯ ಬಾಂಧವ್ಯದೊಳ್ವ್ಯತ್ಯಾಸ ದೇಹಕೋ? ಮನಸಿಗೋ? ಪ್ರಶ್ನೆಯೊಂದುದಿಸಿರಲು| ಬಂಧದಲಿ ಅಂತರವಾಂತರ್ಯದಲಿ ಅಳೆಯುತಲಿ ಪ್ರೇಮವನು ಸ್ರವಿಸಿಹನು ಆ ಗಾಮಿನೀ ಸಖನು..||

----------------------------------

ನೋಂದಣಿ ಐಡಿ : KPFS2-8497

9
Votes
116
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top