ಚೈತ್ರದ ಚಿಗುರು
ರಚನೆ : ರಚಿತಾ ಚೇತನ್
----------------------------------
ಆಮಂತ್ರಣ ವಿಲ್ಲದೆ ಔತಣ ನೀಡಲು ಬರುತಿದೆ. ಪ್ರಕೃತಿಯೇ ಬದಲಾಗಿ ಸಂಭ್ರಮಿಸುತ್ತಿದೆ. ಹೊಸವರ್ಷಕೆ ಚೈತ್ರದ ಚಿಗುರು ಸ್ವಾಗತ ಕೋರಿದೆ. ಪ್ರಕೃತಿಯು ಅಚ್ಚರಿ ಮೂಡಿಸುವ ಸಿರಿಯು ತುಂಬಿದೆ. ಹೂಗುಚ್ಛಗಳು ನಿಸರ್ಗದಲಿ ಚಪ್ಪರವಾಗಿದೆ. ಚಿಗುರು ತುಂಬಿದೆ ಚಿಲಿಪಿಲಿ ಹಕ್ಕಿಗಳ ಹಾಡಿದೆ. ಹೂ ಅರಳಿ ದುಂಬಿಗಳಿಗೆ ಆಹ್ವಾನ ನೀಡಿದೆ. ಸೌಂದರ್ಯ ಕಣ್ತುಂಬಿಕೊಳ್ಳಲು ಕಾಮನಬಿಲ್ಲು ಬಂದಿದೆ. ವೆಚ್ಚವೇ ಇಲ್ಲದ ಸ್ವಸ್ಥ ಆರೋಗ್ಯ ನಮಗೆ ನೀಡಿದೆ.... ಹಚ್ಚ ಹಸಿರಿನ ಅದ್ಭುತ ಪ್ರಕೃತಿ. .. ಉಳಿಸಿ ಬೆಳೆಸಬೇಕೆಂಬ ನಮ್ಮ ಮನಸ್ಥಿತಿ. ಉದುರಿ ಹೋಗಲಿ ನಮ್ಮಅಹಂ ಎನ್ನುವ ಎಲೆಗಳು. ಶುರುವಾಗಲಿ ನವಭಾವದ ಶುಭ ಚೈತ್ರದ ಚಿಗುರು.
----------------------------------
ನೋಂದಣಿ ಐಡಿ : KPFS2-8412