Submission 4785

ಮೊಬೈಲ್ ಫೋನು

ರಚನೆ : ಕೆವಿ ರಾಮನಾಥ ಶೆಟ್ಟಿ

----------------------------------

ಈ ಮೊದಲು ಪ್ರತಿಷ್ಠೆಯ ಮೆರಗು ಫೋನಿನ ಕುರುಹು ಬರ ಬರುತ್ತಾ ಫೋನಾಯಿತು ಜೀವನದ ಅಂಗ ಫೋನಿಲ್ಲದೆ ಜೀವನವೆಲ್ಲ ಭಂಗ ಮುಂದಿನ ಅವತಾರವೇ ವಯರ್ಲೆಸ್ ಫೋನು ಆದರಾಯಿತು ಅದು ಪೊಲೀಸರ ಜೀನು ಮೊಬೈಲ್ನ ಹುಟ್ಟು ರಟ್ಟಾಯಿತು ಎಲ್ಲರ ಗುಟ್ಟು ಅಂಗೈಯಲ್ಲೆ ಅರಮನೆ ಎಚ್ಚರ ತಪ್ಪಿದರೆ ಸೆರೆಮನೆ. ಮುಷ್ಟಿಯಲ್ಲೇ ಪ್ರಪಂಚ ದೇಶ ದೇಶಗಳೆಲ್ಲ ಚಿರಪರಿಚಿತ ಬೆರಳ ಶಕ್ತಿಯೇ ಸಾಕು ವಿಷಯಗಳ ಕೂಡಿ ಹಾಕು ಜೀವನದ ಹಾಸು ಹೊಕ್ಕು ಪೋನಾಯಿಸುವ ಹಕ್ಕು ಪ್ರೇಮಿಗಳ ಒಡನಾಟ ಮೊಬೈಲ್ನ ಕಿರುಚಾಟ ನನಸಾಗದ ಕನಸೆಲ್ಲ ನಿದ್ದೆಯಲ್ಲಿ ಹೊರಳಾಟ ಕಳ್ಳರಿಗೆ ವರವಾದೆ ಮಿಕ್ಕವರಿಗೆ ಶಾಪವಾದೆ ನಿದ್ದೆಗೆಟ್ಟ ಪೊಲೀಸರ ನೋಡಲಾರದ ತೊಳಲಾಟ

----------------------------------

ನೋಂದಣಿ ಐಡಿ : KPFS2-8373

0
Votes
128
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top