ಒಣ ಎಲೆ
ರಚನೆ : ಸಲೀಂ ಮುಈನೀ
----------------------------------
ಒಂಟಿ ಭಾವನೆ ಮೂಡಿದಾಗೆಲ್ಲ ಕಾಡುದಾರಿಯಾಗಿ ಒಮ್ಮೆ ಸುಮ್ಮನೆ ನಡೆದಾಡಿ ಬಿಡಿ ಹಸಿರು ಮರದಿಂದ ಒಣಗಿ ನೆಲದಾಗೆ ಬಿದ್ದು ಕಾಣುವ ಎಲೆಯೊಂದನ್ನು ಕೈಯಾರೆ ಹಿಡಿದು ಮುತ್ತಿಕ್ಕಿ ಬಿಡಿ ವಸಂತ ಬೇರುಗಳು ಭೂಮಿಯಡಿ ತಲುಪಿ ಎಲೆಗಳ ಕಥೆಯನ್ನು ಹೇಳುವುದು ಕೇಳಿಸಿ ನೋಡಿ ಆಗ ಸುರಿಯುವ ಜಡಿಮಳೆಗೆ ಒದ್ದೆಯಾಗಿಮತ್ತೆ ಯಾತ್ರೆ ಆರಂಭಿಸಿ ನೋಡಿ ದಾರಿ ಬದಿಯ ಹೂವಿನ ಗಿಡಗಳ ಪ್ರತಿ ಹೂವು ಒಂದೊಂದು ಕಥೆಯ ನಿನ್ನ ಬಳಿ ಹೇಳುತ್ತಾ ಸಾಗುವುದನ್ನು ನೋಡಿ
----------------------------------
ನೋಂದಣಿ ಐಡಿ : KPFS2-8372