ಭಯೋತ್ಪಾದನೆ ಸ್ಫೋಟ
ರಚನೆ : ನಿರಂಜನ ಕುಮಾರ್ ಎ
----------------------------------
ಮನುಷ್ಯ ಮನುಷ್ಯರನ್ನೇ ಕೊಂದು ಹಾಕುವ ಯೋಜನೆ, ಭಯೋತ್ಪಾದನೆ.. ಇಡೀ ಮನುಕುಲ ಮಾಡಬೇಕಿದೆ ಇದರ ಚಿಂತನೆ.. ಸಮಾಜದಲ್ಲಿ ಶಾಂತಿ ಕೆಡಿಸಿ, ಭಯದ ವಾತಾವರಣ ಮೂಡಿಸಿ... ಅಲ್ಲಲ್ಲಿ ಬಾಂಬುಗಳ ಸ್ಪೋಟ, ಅಮಾಯಕ ಜೀವಗಳ ಜೊತೆ ಚೆಲ್ಲಾಟ, ಅಂಗಾಂಗ ಕಳೆದುಕೊಂಡವರ ಚೀರಾಟ, ಅರೆ ಬೆಂದ ದೇಹಗಳ ನರಳಾಟ... ಸ್ಪೋಟದಲ್ಲಿ ತಾಯಿ ಕಳೆದುಕೊಂಡ ಮಗು, ಯಾರಾದರೂ ಕಾಪಾಡಿ ಕಾಪಾಡಿ ಎನ್ನುವ ಕೂಗು... ರೋದನೆ ನೋವಿನ ವೇದನೆ, ನಿಮ್ಮಲ್ಲಿ ನನ್ನದೊಂದು ನಿವೇದನೆ, ಮಾಡಿದ ತಪ್ಪಿಗೆ ಅನುಭವಿಸುವ ನೋವು, ಭಯೋತ್ಪಾದನೆ ವಿರುದ್ಧ ಹೋರಾಡೋಣ ನಾವು ನೀವು...
----------------------------------
ನೋಂದಣಿ ಐಡಿ : KPFS2-8248