ಎಲ್ಲಿಗೋ ಈ ಸೆಳೆತ!
ರಚನೆ : ರಂಗನಾಥ್ ಹೆಚ್
----------------------------------
ಯಾವುದೋ ಕಡೆಯಿಂದ ಕರೆದಂತೆ ಅನುಬಂಧ ಯಾರದೋ ಕನಸಿಂದ ನಡೆದಂತೆ ಸಂಬಂಧ ಕಾಣದ ನೆಲದಿಂದ ನೆನಪಿನ ಹೊಸಗಂಧ ಎಲ್ಲಿಗೋ ಈ ಸೆಳೆತಾ.? ಕಾಡಿನ ಮೌನ ಗಾಳಿಯಲಿ ಮಾತಿನ ಧ್ಯಾನ ಧೂಳಿನಲಿ ಎಲ್ಲೋ ಹುಟ್ಟಿ ಕಡಲಿಗೆ ಹರಿದಂತೆ ಗಂಗೆ ಇಲ್ಲೇ ಹುಟ್ಟಿ ಇನ್ನೂ ಎಚ್ಚರವಿಲ್ಲ ಎಲ್ಲರೊಳು ನಡೆಯುತ್ತಿದೆ ದಂಗೆ. ಯಾರಿಂದ ಈ ದೋಷ.? ನೋಡಿ ಹಾಗೆ ನಡೆದರೆ ನ್ಯಾಯವಿಲ್ಲ ಬೇಡಿ ಕೇಳದೆ ಏನೂ ಸಿಗೋದಿಲ್ಲ ಕಾಯಿಸಿ ಕಾಡಿಯೇ ಈ ಬದುಕು ಕಳವಳ ಬಿಟ್ಟು, ಹುಡುಕು ಬೆಳಕು.
----------------------------------
ನೋಂದಣಿ ಐಡಿ : KPFS2-8194