Submission 4296

ಅನಿವಾರ್ಯ

ರಚನೆ : ಆಶಾ ಎಸ್ ಯಮಕನಮರಡಿ

----------------------------------

ಬಾನೆತ್ತರದ ಬಯಕೆಗಳನ್ನೆಲ್ಲಾ ಬಚ್ಚಿಟ್ಟಿರುವೆ ಕಣ್ಣ ತುಂಬಿದ ಕನಸುಗಳನ್ನೆಲ್ಲಾ ಮುಚ್ಚಿಟ್ಟಿರುವೆ ಯಾರು ಅರಿಯಲಾರರು ನಮ್ಮ ಮನದಾಳವನ್ನು ಮುಗಿಲೆತ್ತರದ ಧ್ವನಿಗೆ ಯಾರೂ ಉತ್ತರಿಸಲಾರರು ಅಂದಿನಿಂದ ಇಂದಿನವರೆಗೂ ಒಂದೆ ತರದ ಬದುಕು ಕೊಂಚ ಕದಲಿದರೂ ಸಂಚಿಗೆ ಬಲಿಯಾಗುವ ಭಯ ಮೊಗ್ಗು ಹಿಗ್ಗುವ ಮೊದಲೆ ಗಂಧ ಬಯಸುವರು ಇಲ್ಲಿ ಚಿಗುರಿಗೂ ಭಯವಿಲ್ಲಿ ಮೂಡಿಬರಲು ಬೇಲಿ ಹಾಕಿದ ತೋಟಕ್ಕೂ ಇಲ್ಲಾ ಸುರಕ್ಷತೆ ಭದ್ರ ಗೋಡೆ ಒಡೆಯುವುದನು ಬಲ್ಲರು ಎಲ್ಲಾ ಎಲ್ಲಿ ಬಚ್ಚಿಟ್ಟುಕೊಳ್ಳುವುದು ಇಲ್ಲಿ ತಿಳಿಯದಾಗಿದೆ ರೆಕ್ಕೆ ಬಿಚ್ಚಿ ಹಾರುವುದು ಮರೆತೆಹೋಗಿದೆ ಭೂಮಿ ದುಂಡಗಿದೆ ಸಂಧಿಸುವುದು ಅನಿವಾರ್ಯವಿಲ್ಲಿ ಉಳಿದುಕೊಂಡಿದೆ ದಾರಿ ಭೂಮಿಆಳಕೆ ಇಳಿದು ಹೋಗುವುದು

----------------------------------

ನೋಂದಣಿ ಐಡಿ : KPFS2-7996

4
Votes
209
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top