ಸೈನಿಕರು
ರಚನೆ : ಲಕ್ಷ್ಮಯ್ಯ ವಿ
----------------------------------
ಸದೆಬಡಿದು ಧೃತಿಗೆಡದೆ ತಾಯಿ ತಂದೆ ಬಂಧು ಬಾಂಧವರ ತೊರೆದು ಹಸನ್ಮುಖಿಯಾಗಿ ಸೇವೆ ಗೈಯಲು ಸೈನಿಕತೆಗೆ ಸೇರುವ ದೇಶದ ಸೈನ್ಯಕ್ಕೆ ಸೇರುವ! ನಾನಾರೆಂಬುದನ್ನು ಮರೆತು ರಾಷ್ಟ್ರಎನಗೊಂದೆ ಎಂದು ತಿಳಿದು ಪ್ರೀತಿ ಮಮತೆ ಸ್ವಾರ್ಥತೆಯ ಕಟ್ಟಿಟ್ಟು ದೇಶ ರಕ್ಷಣೆಯೊಂದಕೆ ಕಂಕಣವ ಕಟ್ಟಿದ್ದು! ಜಾತಿ-ಮತ, ಬಿಸಿಲು-ಮಳೆ-ಚಳಿಯನ್ನದೆ ಗಡಿಕಾಯುವವರು ರಾತ್ರಿ ಹಗಲೆನ್ನದೆ ಪ್ರೀತಿಲಿ ಸ್ನೇಹವ ಗಳಿಸಿ,ದ್ವೇಷದಿ ಉಗ್ರರಡಗಿಸಿ! ಎದೆ ಕೊಟ್ಟು ಧೈರ್ಯದಿ, ಪ್ರಾಣವ ಲೆಕ್ಕಿಸಲಿಲ್ಲ ಪ್ರಜೆಗಳ ಪ್ರಾಣವ ಬಲಿ ಕೊಟ್ಟವರಲ್ಲ ರಾಷ್ಟ್ರ ರಕ್ಷಣೆಯ ದೈವಿ ಸಂಭೂತರಿವರು ದೇಶ ಕಾಯುವ ವೀರ ಸೈನಿಕರು!
----------------------------------
ನೋಂದಣಿ ಐಡಿ : KPFS2-7989