Submission 4282

ನೀನು ಬಿಟ್ಟು ಹೋದ ಮೇಲೆ

ರಚನೆ : ಧನಂಜಯ ಮೇಂಗಸಂದ್ರ

----------------------------------

ನೀನು ಬಿಟ್ಟು ಹೋದ ಮೇಲೆ ಭಾವ ಬಂಧಿಯಾಗಿದೆ ಕೊಳಲನುಲಿಯು ಕೊರಳಿನಲ್ಲೇ ಕರಗಿ ಕರಟವಾಗಿದೆ ಎದೆಯ ಹಿಗ್ಗು ಕುಗ್ಗಿಹೋಗಿ ಹಕ್ಕಿ ಗೂಡಂತಾಗಿದೆ ಚೈತ್ರ ಚೇತನ ಬತ್ತಿ ಹೋಗಿ ಚಿಂತೆ ಚಿತೆಯೇ ಆಗಿದೆ ಪ್ರಣತೆ ಪ್ರಕಾಶ ಮಂದವಾಗಿ ಗವ್ವೆನ್ನುವ ಕತ್ತಲಾಗಿದೆ ನವೋಲ್ಲಾಸ ಕಮರಿ ಹೋಗಿ ಚಿಂತೆ ಚಿತೆಯೇ ಆಗಿದೆ ಕಾಯಕವೇ ಕಳೆದು ಹೋಗಿ ಕಾಯ ಬಸವಳಿದಿದೆ. ಬಂದೆ ಬರುವೆಯೆಂದು ನಂಬಿ ಜೀವ ಸರೆಯಾಗಿದೆ

----------------------------------

ನೋಂದಣಿ ಐಡಿ : KPFS2-7982

8
Votes
147
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top