ರಾಧೆ ರಾಧೆ..
ರಚನೆ : ಇಂದು ಎಸ್ ಆರ್
----------------------------------
ಅವಳೇ ಹಾಗೆ ಅವನನ್ನು ಮನದುಂಬಿ ಆರಾಧಿಸಿದವಳು ಜಗದಗಲದ ಪ್ರೀತಿಯ ಅವನಲ್ಲಿ ಕಂಡವಳು... ಅನಂತದವರೆಗೆ ಜೊತೆಗಿರುವುದು ನಮ್ಮ ಪ್ರೀತಿಯೆಂದು ಲೋಕಕ್ಕೆ ಸಾರಿದವಳು ಎಷ್ಟೇ ಮುನಿಸಿದ್ದರೂ ಅವನನ್ನು ಮನ್ನಿಸುವವಳು ಅವನ ತುಂಟಾಟಗಳನ್ನು ಸಹಿಸಿಕೊಂಡವಳು ಮೂಗಿನ ತುದಿಯಲ್ಲಿ ಕೋಪವಿದ್ದರೂ ಮನಸ್ಸಿನ ತುಂಬಾ ಅವನ ಮೇಲೆ ಅಪಾರ ಪ್ರೀತಿಯ ಹೊಂದಿದವಳು ಪ್ರೀತಿ ಎಂಬುದು ಕಣ್ಣಿನಿಂದ ಶುರುವಾಗಿ ಮನಸ್ಸಿನಲ್ಲಿ ಮರೆಯಲಾಗದೆ ಉಳಿಯುವುದು ಎಂದು ತೋರಿಸಿಕೊಟ್ಟವಳು ತನ್ನ ಪ್ರೀತಿಯ ಮೂಲಕವೇ ಜಗತ್ತಿಗೆ ಮಾದರಿಯಾದವಳು
----------------------------------
ನೋಂದಣಿ ಐಡಿ : KPFS2-7866