ಸಾವಿನ ಸೂತಕ
ರಚನೆ : ಕಿರಣ್, ಎಸ್.
----------------------------------
ನಾ ಕಟ್ಟಿದ ಸೂರಿಗೆ ; ನಾ ಸತ್ತರೆ ಸೂತಕ ನನ್ನವರಿಗೂ ಸೂತಕ; ಮುಟ್ಟಿಸಿಕೊಂಡವರಿಗೂ ಸೂತಕ, ನನ್ನನ್ನು ತೊಳೆದರು, ಕಣ್ಣೀರಿಟ್ಟು ಮನೆ ಮನವನ್ನು ತೊಳೆದರು. ಬೆಂಕಿಗೋ ; ಮಣ್ಣಿಗೋ ಹಾಕಿ ಕೂಳು ಬೇಯಿಸಿ; ದೀವಿಗೆ ಬೆಳಗಿಸಿ ಹಾಸಿಗೆಯೂ ಆಸಲಿಲ್ಲ ಮಣ್ಣಿನಲ್ಲೇ ಮುಚ್ಚಿದರು ಬೆಚ್ಚನೆ ಗುಡಿಯೊಳಗೆ ಕಣ್ಣೀರ ಕಂಬಳಿ ಒತ್ತು ಬಣ್ಣ-ಸುಣ್ಣ ಹೊಡೆದು, ನನ್ನೆಸರಿನಲ್ಲೇ ಉಂಡು ಮರೆ ಮಾಡಿದರು. ನನ್ನನ್ನು ನನ್ನ ಸಿರಿಯನ್ನು ಅನುಭವಿಸಲು ಇಲ್ಲದ ಸೂತಕ, ನಾ ಸತ್ತಾಗ ಬಂತು ಪಲ್ಲಕ್ಕಿ ಕಟ್ಟಿದರೇನು ಫಲ;ಸದ್ದು ಮಾಡಿದರು ನಾ ಎದ್ದು ಬರಲಿಲ್ಲ, ಸಾವು ನಿಸರ್ಗದ ಚೆಲುವು ಮನದ ಸೂತಕವ ಶುಚಿಗೊಳಿಸಿ.
----------------------------------
ನೋಂದಣಿ ಐಡಿ : KPFS2-7710