Submission 3894

ಸಾಕಲ್ಲವೇ ಉಳಿದಿಷ್ಟು ಬದುಕಿಗೆ..?

ರಚನೆ : ಕವಿತಾ ವಿರೂಪಾಕ್ಷ

----------------------------------

ನೀವ್ಹೋದ ಮೂರನೇ ದಿನದಲ್ಲಿ ಹೊರಗೊಬ್ಬರು ಹೇಳುತ್ತಿದ್ದರು, ಹೋದವರ ವಸ್ತು ಅಶುಭ ಎಸೆದುಬಿಡಿ! ಒಳಗಿದ್ದ ನನಗೆ ಒಮ್ಮೆಲೇ ದಿಗಿಲಾಯಿತು! ಸುತ್ತಲೂ ಕಣ್ಣಾಡಿಸಿದೆ, ನೇತು ಹಾಕಿದ ಶರ್ಟು,ಹೆಲ್ಮೆಟ್, ಬ್ರಶ್,ಬಾಚಣಿಗೆ,ಬಳಸಿದ ಪೆನ್ನು ಪುಸ್ತಕ,ಕೀ,ಪರ್ಸು, ಕೈಗಡಿಯಾರ, ನೀವೇ ಗುರುತು ಮಾಡಿದ ಕ್ಯಾಲೆಂಡರ್ ಹಾಗೂ ನಿಮ್ಮದೇ ಸ್ವಂತವಾಗಿದ್ದ 'ನಾನು'!! ಅತ್ತು ಕರೆದು ಗೋಗರೆದರೂ ಅವರು ಎಲ್ಲವನ್ನೂ ಹೊರಹಾಕಿದರು; ಅವರಿಗೆ ಬೇಕಾಗಿದ್ದುದರ ಜೊತೆಗೆ ನನ್ನನ್ನುಬಿಟ್ಟು!! ನೆನಪುಗಳನ್ನು ಗುಜರಿ ಲೆಕ್ಕದಲ್ಲಿ ತೂಗಿ ಬೇಡವೆಂದು ಹೊರ ಹಾಕಲಾದೀತೆ ಗಾಲಿಬ್? ಅವು ಹಳೆಯದಾದಷ್ಟು ಅನರ್ಘ್ಯ ಆತ್ಮ ಸಾಂಗತ್ಯ ಪಡೆದ ಅಳಿದುಳಿದ ಬದುಕಿನ ಭಾವಗೀತೆ!

----------------------------------

ನೋಂದಣಿ ಐಡಿ : KPFS2-7678

66
Votes
579
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top